Thursday, March 29, 2018

The Satyam Fraud-Role of the Auditors


The fraud committed by Ramalinga Raju, the CMD of Satyam Computers Ltd, the fourth biggest software exporter in India, has attracted the attention of the investors world-wide. What has surprised the investors in general is the fact that the fraud was committed over a period of seven years without absolutely attracting any attention of a highly reputed international audit firm like PWC. Added to this was the fact that the internal audit department of the company was given an international award for maintaining excellent standards in its audit functions!

While the normal external audit of a company involves following certain procedures, well-documented, as per the requirements of the Indian companies act and followed rigidly by the chartered Accountant firms in general, the guidelines for the internal audit vary in different companies depending on the risk factors assessed over a period of time. While it is difficult to make out as to where exactly the internal audit failed in playing its intended role in Satyam, one conclusion could be easily arrived at. That is - it failed to cover three most important basic assets of the company - the cash/ bank balance, deposits/other investments and the debtors! If only the internal auditors and the external auditors had just covered these three major current assets of the company just as a matter of routine, the story could have been totally different today.

Before we go into the methodology to be followed while looking at these items during external/internal audit, let us first analyse how the audit of a software company is different from that of a manufacturing or a trading company. It may be noted here that the major portion of revenues of software companies are derived out of exports. But here again, the aspects to be audited are much simpler unlike in case of a merchandise exporter. The exports are invisible and are devoid of shipping documents, duties, customs clearance, insurance coverage, licensing requirements etc. In general an auditor of a software company enjoys the luxury of having no responsibility to audit the following:
1. There is no burden of physical verification and valuation of inventory, which is a major head ache to the auditors, particularly the work-in-progress.

2. There is no need to verify insurance coverage, identifying the non-moving stock and verification of under/over invoicing of finished stock etc.

3. As no bank finance is involved, it saves the burden of verification of interest charged by the bankers, etc.

Let us now come to those aspects which the external auditors should have covered in the normal course for a software company like Satyam.

The Receivables

The first and the foremost is the portfolio of receivables or book debts. The performance of a Software company depends mainly on the velocity of liquidation of receivables it raises in its books against its clients. The company will have several clients who have entered into long term contracts with it. The terms of payment are specifically mentioned in the relevant agreements. The billing (raising of book debts) is also done in the books of the company in accordance with the specified payment terms. Once a bill is raised and sent to the clients, the company should follow up for payment as agreed by the client. There may be several clients for whom the company may be executing individual projects.  Here again, the billing may have to be done progressively or only on completion depending on the terms agreed for the individual projects. There may also be many clients for whom the company may be lending services of its employees (body shopping). In such cases the billing is done on the basis of number of employees and number of hours worked. The billing in such cases is generally done on a monthly basis.

The auditors’ role here is cut out as follows:
Ø  Verify whether bills are raised promptly and correctly as per terms of contract.
Ø  Verify whether payments for the bills are received in full as agreed and in time.
Ø  Whether there is a proper monitoring of overdue bills, if any?
Ø  Whether the overdue position is escalated to the appropriate authorities?
Ø  In case of delayed payments whether there is any system of collecting penalties or overdue interest? Whether such matters are escalated so that the decision is taken at the right level?
Ø  Whether the total outstanding book debts are in tune with the industry standards?
Ø  Whether any bills have been raised without the backing of relevant agreements or contracts?
Ø  Whether the bills have been raised for higher amounts to show higher revenues in the books? This aspect is to be focused more for the last quarter of the financial year.
Ø  Are there any instances where the payments have been received, but the bills are allowed to outstand intentionally?
Ø  In case advance payments are made as per contract terms whether the same are adjusted as agreed while raising the bills?
The bank deposits/other investments

Most of the top Software companies generally have huge cash reserves in their books. The companies may use the cash for expansion of business and/or acquiring other companies or liquidate the same by paying huge dividends. Till such time the money has to be parked in liquid securities like bank deposits/mutual funds/short-term bonds. A small percentage of cash may be held in bank current accounts also to meet the exigencies. The auditors’ role boils down to:

Ø  Verification of whether the investments made are in line with the company’s investment policy.
Ø  Verification of the physical securities in full covering bank deposit receipts, mutual fund certificates/demat accounts and bond certificates.
Ø  Verification of receipt of periodical interest on the deposits and bonds and dividend in case of mutual funds.
Ø  Verification of certificates of tax deducted at source by the banks on the deposits held with them.
Ø  Verification of whether the company has taken into account such tax deducted at source while arriving and remitting advance tax for the year.
Ø  In case if the total tax deducted is exceeding the total tax payable by the company, whether refund of such excess tax deducted at source is sought from the tax authority?

Cash and bank balances

The auditor’s will have the following aspects to be covered:

Ø  Whether the petty cash held by the company offices are reasonable with the business needs?
Ø  Whether the balances held in current accounts are reasonable? In cases of huge balances the reasons are to be ascertained as such balances do not earn any interest to the company.
Ø  Whether the bank statements are received periodically and reconciled with the company’s books?
Ø  Whether the unreconciled items if any are followed up with the bank and reconciled at the earliest?
Ø  Whether there are any huge withdrawals from the accounts not connected to the normal business of the company? If so the beneficiaries are to be ascertained to see whether there is any diversion of funds.

The auditors have to ensure that they cover all the bank accounts. They are also expected to directly call for balance confirmations (certificate of balances) from the concerned banks to ensure that the company has not manipulated the bank balances and deposits in its books.

Conclusion
The letter of Ramalinga Raju, CMD, mentions three major areas of manipulation in the company’s books. They are cash and bank balances, debtors and non-existing accrued interest. It is also being reported in the media that fake bank deposit receipts and certificates of tax deducted at source were produced to the auditors for verification by the company.

It is apparent from the above mentioned check points that the fraud in all the above areas including non-existent accrued interest could have been easily detected by the auditors if only they had followed the check list thoroughly. However, it may be interesting to find out as to how Raju could raise Rs1,230 crore without accounting the same in the books of the company. The margin of only 3 percent mentioned by Raju also raises major questions. We have to wait for the completion of the enquiries to know the ‘modus operandi’ followed in one of the greatest corporate frauds ever committed in India.

Wednesday, March 28, 2018

Fraudulent Currency Deals at Hexaware Technologies -A case Study


A news item in all the major financial news papers on 27th November 2007 stated that the Mumbai-based IT firm Hexaware Technologies’ earnings for the current fiscal may take a dent, as it is expected to suffer a loss of about $20-25 million (Rs 80-Rs100 crore) owing to “potentially fraudulent” foreign exchange transactions conducted by a senior company official.

The ordinary reader may be excused if he thinks that Hexagon must be engaged in investment banking activities. On the other hand a risk officer in one of the investment banks would be tempted to compare the episode to that of Barings Plc also known as ‘Queens Bank’. In fact the modus operandi appears to be the same, even though on a smaller scale, in view of the fact that the official was working for a technology company and the scope was limited.

The following is a brief account of the incident as revealed by the company:
Ø  The unnamed official had committed the company to several forex contracts involving ‘options’ during the last few months without proper authority and had actively concealed these transactions from the company board. The official was in the treasury department reporting to Chief Financial Officer.
Ø  The company also said it was suspending the official in this connection for actively concealing these transactions and exercising unauthorized fiduciary powers.
Ø  The company has discovered about 11 unauthorized forex deals entered on the company’s behalf pertaining to currencies such as the dollar, Euro, Pound Sterling, Yen and Swiss Francs. However, the company did not give the total value of the contracts. Options contracts grant their buyers the right to buy or sell a security at a set price by a given date.
Ø  The company now wants to soak up the losses in the current fiscal year itself and hence it is looking at unwinding most of these options in the current quarter. The company has set aside about $25 million to cover potential losses.
Ø  The company has constituted a special committee to conduct an internal investigation and suggest changes to the company’s foreign exchange management practices. The committee is expected to come out with its findings within 30 days.
Ø  The company has also placed an embargo on all options deals. Further, it has decided that future forex deals will necessarily have to be transacted jointly by two signatories out of the designated four from the top management.
Ø  The company has roped in consultant Jamal Mecklai to work with it on minimizing the negative impact of these transactions. The company said as of now, no criminal proceedings had been initiated against the employee who had conducted the option transactions and actively concealed them.
Ø  As per the chairman of the company, there is no need to get in to these structured option deals. There is only need for a simple forward cover. In addition to the special committee appointed to conduct an investigation into the transactions; an internal task force dedicated to mitigating the impact of the forex option transactions had also been constituted. One of the executive directors has been relocated from the firm’s Chennai facility to its office in Mumbai to oversee the matter on a full-time basis
Ø  According to sources, a small private bank, at least two large foreign banks with significant presence in India—were involved in the transactions. The company did not wish to name the banks.

This episode is an eye opener for all the technology companies as they are also equally vulnerable to such acts by their officials unless suitable controls and reporting systems are in place.

 In this background it is necessary to understand the present position regarding handling of foreign exchange transactions by these technology companies.
·       There was a time when dollar was at its peak as against Indian rupee. The going was too good and even the exchange cover by way of swap was felt not necessary.
·       The situation is totally reversed now. The companies have to not only hedge their currency realizations; they have to look in to some innovations to cover the exchange risk. With the rupee's unrelenting march against dollar continuing, smart hedging has increasingly been taking the mindshare of finance heads of Indian enterprises that service US customers.
·       According to currency market sources, several companies, taking bets that euro and yen will slip against dollar, have struck derivatives deals to cut cost and prop up revenue without assessing the hidden exchange risks. They said more such hits from option deals are feared in the coming days. Some of the companies will, however, find a way to absorb the losses and keep the development out of public domain.
·       In addition to traditional options, enterprises are increasingly strategizing innovative and smart ways and means to offset the risk of forex conversion on profitability. Multi-currency options, insisting customers to pay in euro or even including a forex eventuality clause in contracts are some of the innovative options that are thought about.
·       One particular company has stated that forward contracts accounts for 75% of their hedge while more riskier option contract is only 25%. Another option is to create a dollar payable loan thereby creating a reverse exposure. Even an attempt is said to be being made to enter in to rupee denomination contracts. But many customers may not oblige as it is about moving the currency risk to their side.

The Issues:

Role of Banks:
§  The company has not revealed the names of the bankers involved. Obviously the intention is to retain their good will. But definitely the company has a good case against them.
§  Whether the company is aware or not the banks are liable for their actions if they have not taken due care to ensure that the necessary legal formalities are completed before any facility is made available.
§  The facilities like forward exchange cover and options are contracts entered into between the banks and the customer companies undertaking delivery of foreign currencies on a future date at the agreed rates. In case of options there is the provision to either complete or reject the transaction on due dates; but at a cost already fixed.
§  Bankers treat all such contracts as contingent liabilities. The facilities are made available within certain limits assessed basing on the needs, the soundness and past dealings of the companies.
§  Bankers always insist on the company to pass a suitable resolution by the board of directors authorizing specified directors to avail the facility and to execute the necessary documents. It should be noted here that such powers cannot be delegated down the line by the concerned directors. Such action would be ultra vires the company.
§  Even though there are specific sanctioned limits bankers are not expected to make available these facilities as a routine. It is incumbent upon them to ensure that the facility is not used for speculative purposes. They should also ensure that the requisite documents and applications are signed by the authorized signatories only. Any attempt to avail the facilities without following the usual formalities should be immediately brought to the notice of the top management. Wherever joint signatories are involved it is essential to ensure both the signatures.
§  Any transaction which appears to be beyond the normal business of the company should be brought to the notice of the top management.

Viewed in the above back ground the company’s situation can be analyzed as follows:
v The company’s internal controls and reporting systems were not in place.
v The company’s policy does not permit these kinds of deals at all. Only a simple forward cover is permitted. The CFO should have ensured that the official concerned was working within this policy.
v The official in charge of banking transactions could act independently.
v The Chief Financial Officer to whom the above official was reporting was not aware of the goings on in the major functions of his portfolio. He should have ensured that the official concerned was working within the company policy only.
v The news reports mention the transactions as “potentially fraudulent”. It is not clear as to what motivated the official to commit such fraud. On the face of it, unlike in banks and other financial institutions, such fraudulent transactions cannot result in any monetary benefit to the officer concerned in a technology company.
v It is very much possible that entering into such contracts in the past might have benefited the company substantially. As a result the official might have been given a free hand by the CFO to continue with such practice. Now that the transactions have resulted in losses he may be feigning ignorance! However he is accountable on both the counts!

The following preventive actions are suggested (For Technology companies in general):
*     The company should have a foreign exchange policy in place. It is advisable to permit only simple forward cover. There is no necessity to permit exotic forex structured options deals. A technology company is not expected to have expertise in this area; neither is it desirable.
*     The official in charge should take prior consent from the CFO for each individual deals. A simple office note system followed by banks may be put in place.
*     A periodical report may be placed before the Managing Director covering all such transactions for his perusal.
*     The board resolution covering the banking transactions should provide that the deal application to banks should invariably signed by two officials, one being the Chief financial Officer himself.
*     Bankers should be given clear instructions that all important documents will have joint signatures and no deviation is to be allowed.
*     Internal auditors may be advised to verify and confirm that all the banking transactions are strictly as per company policy. Also that no transactions are taking place without the due concurrence of the CFO.

Concluded

Friday, March 23, 2018

ಒಂದು ಊರಿನ ಕಥೆ - 7 (ಹೊಕ್ಕಳಿಕೆ)


ಭಾವನವರ ಆಳುಗಳು ವಾಸಮಾಡುತ್ತಿದ್ದ ಕೊಟ್ಟಿಗೆಯ ಪಕ್ಕದಲ್ಲೇ ಇನ್ನೊಂದು  ಆಳುಗಳ ಬಿಡಾರವಿತ್ತು. ಅದರಲ್ಲಿ ಗೋವಿಂದ ಶೆಟ್ಟಿ ಎಂಬ ಮಧ್ಯ ವಯಸ್ಸಿನ ಆಳು ವಾಸಮಾಡುತ್ತಿದ್ದ. ನನಗೆ ನೆನಪಿದ್ದಂತೆ ಅವನು ಅಚ್ಯುತಯ್ಯನವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಪ್ರಾಯಶಃ ಅವನ  ಹೆಂಡತಿ ಮಕ್ಕಳು ದಕ್ಷಿಣ ಕನ್ನಡದಲ್ಲೇ ಉಳಿದಿರಬೇಕು. ಒಂಟಿಯಾಗಿದ್ದ ಗೋವಿಂದ ಶೆಟ್ಟಿಯ ಕಣ್ಣು ಶೀನನ ಹೆಂಡತಿ ಲಕ್ಷ್ಮಿಯ ಮೇಲೆ ಬಿತ್ತು. ಇವರಿಬ್ಬರ ಅನೈತಿಕ ಸಂಬಂಧ ಊರಿನವರಿಗೆಲ್ಲಾ ಗೊತ್ತಾದರೂ ಶೀನ ಮಾತ್ರಾ ಕಣ್ಣು ಮುಚ್ಚಿಕೊಂಡಿದ್ದ. ಶೀನ, ಹಿರಿಯ ಮತ್ತು ನಕ್ರ ಎಲ್ಲರೂ ಮರಾಠಿ ಪಂಗಡಕ್ಕೆ ಸೇರಿದ ನಾಯ್ಕ ಕುಲದವರು. ಈ ಕುಲಕ್ಕೆ ಸೇರಿದ ಇನ್ನಿಬ್ಬರು ತರುಣ ಆಳುಗಳಿಗೆ ಗೋವಿಂದಶೆಟ್ಟಿಯ ಅನೈತಿಕ ಸಂಬಂಧ ಏನೂ ಇಷ್ಟವಿರಲಿಲ್ಲ. ಒಂದು ದಿನ ಯಾವುದೋ ಕಾರಣಕ್ಕೆ ಅವರು ಶೆಟ್ಟಿಯೊಡನೆ ಜಗಳ ತೆಗೆದರು. ನಮ್ಮ ಕಣ್ಣು ಮುಂದೆಯೇ ಈ ಜಗಳ ಅತಿರೇಕಕ್ಕೆ ಹೋಗಿ ಅವರಿಬ್ಬರೂ ಸೇರಿ ಗೋವಿಂದಶೆಟ್ಟಿಗೆ ಚೆನ್ನಾಗಿ ದೊಣ್ಣೆ ರುಚಿ ತೋರಿಸಿಬಿಟ್ಟರು. ಆ ಬಿಸಿರಕ್ತದ ತರುಣರಿಗೆ ಪ್ರಸಂಗ ಹೇಗೆ ಮುಂದುವರಿಯುವುದೆಂಬ ಬಗ್ಗೆ ಸ್ವಲ್ಪವೂ ಅರಿವಿರಲಿಲ್ಲ.

ಹೊಡೆತ ತಿಂದ ಗೋವಿಂದ ಶೆಟ್ಟಿ ಎರಡು ದಿನ ಯಾರ ಕಣ್ಣಿಗೂ ಬೀಳಲಿಲ್ಲ. ಅವನ  ಬಿಡಾರದ ಬಾಗಿಲು ಮುಚ್ಚಿತ್ತು. ಆ ದಿನಗಳಲ್ಲಿ ಗೋವಿಂದ ಶೆಟ್ಟಿಯ ಬಂಟ ಸಮುದಾಯದ ಬೇರೆ ಯಾವ ಕೂಲಿ ಆಳುಗಳೂ (ಕಮಲ ಶೆಡ್ತಿಯ ಹೊರತು) ಹೊಕ್ಕಳಿಕೆಯಲ್ಲಿ ಇರಲಿಲ್ಲ. ಮಂಜೇಶೆಟ್ಟಿಯ ಹೋಟೆಲ್ ಇದ್ದರೂ ಅವನು ಇಂತಹ ವಿಷಯಗಳಿಗೆ ತಲೆ ಹಾಕುತ್ತಿರಲಿಲ್ಲ. ಹಾಗಾಗಿ ಮರಾಠಿ ನಾಯ್ಕರಿಗೆ ಬೇರೆ ಬಂಟ ಸಮುದಾಯದವರ ಭಯ ಕೊಂಚವೂ ಇರಲಿಲ್ಲ. ಆದರೆ ಅವರ ಭಾವನೆ ಎಷ್ಟು ತಪ್ಪಾಗಿತ್ತೆಂದು ಬೇಗನೆ ಅರಿವಾಯಿತು.

ಇದ್ದಕ್ಕಿದ್ದಂತೆ  ಒಂದು ಸಮಾಚಾರ ಹೊಕ್ಕಳಿಕೆ ಊರನ್ನು ತಲುಪಿತು. ಅದೇನೆಂದರೆ ಗೋವಿಂದಶೆಟ್ಟಿ ಸೀದಾ ಬಂಟ ಸಮುದಾಯದ ಮುಖ್ಯಸ್ಥರೂ ಮತ್ತು  ಶ್ರೀಮಂತ ಜಮೀನ್ದಾರರಾಗಿದ್ದ ಬಚ್ಚಣಿಕೆ ಕೊರಗಶೆಟ್ಟಿಯವರ ಮನೆಗೆ ಹೋಗಿ ತನಗಾದ ಅವಮಾನವನ್ನು ಹೇಳಿಕೊಂಡಿದ್ದನಂತೆ. ಅವರು ಹರಿಹರಪುರದ ಸುತ್ತಮುತ್ತಲಿದ್ದ ಬಂಟರೆಲ್ಲರ ಸಭೆ ಕರೆದರಂತೆ.  ತಮ್ಮ ಸಮುದಾಯದ ಒಬ್ಬನಿಗೆ ಆದ ಅವಮಾನ ಯಾರಿಗೂ ಸಹಿಸಲಾಗಲಿಲ್ಲವಂತೆ. ಸಭೆಯಲ್ಲಿ ಹೊಕ್ಕಳಿಕೆ ಮರಾಠಿ ಕುಟುಂಬಗಳಿಗೆ ಬಂಟರ ಸೇನೆಯ ಧಾಳಿಯ ಹಾಗೂ ಅವರ ಪೆಟ್ಟಿನ ರುಚಿ ತೋರಿಸುವುದೆಂದು ತೀರ್ಮಾನ ಮಾಡಲಾಯಿತಂತೆ. ಅದಕ್ಕಾಗಿ ಒಂದು ದಿನವನ್ನೂ ಗೊತ್ತು ಮಾಡಲಾಯಿತಂತೆ.

ಬಂಟ ಮರಾಠ ಕಾಳಗ
ಸುದ್ದಿ ಬಹು ಬೇಗನೆ ಊರಿನಲ್ಲೆಲ್ಲಾ ಹರಡಿತು. ನಮಗಂತೂ ಈ ಕಾಳಗ ಹೇಗೆ ನಡೆಯುವುದು ಹಾಗೂ ಮುಕ್ತಾಯಗೊಳ್ಳುವುದೆಂದು ನೋಡಲು ತುಂಬಾ ಕುತೂಹಲವಿತ್ತು. ನಾವು ಅಲ್ಲಿಯವರೆಗೆ ಕೇವಲ ಯಕ್ಷಗಾನಗಳ ಕಾಳಗಗಳನ್ನು ಮಾತ್ರ ನೋಡಿದ್ದೆವು. ಆದರೆ ಅವು ಕೇವಲ ಇಬ್ಬರ ನಡುವೆ ನಡೆಯುತ್ತಿದ್ದ ನಟನೆಯ  ಕಾಳಗ. ಆದರೆ ಈಗ ನೋಡಬಹುದಾದದ್ದು ಎರಡು ಸಮುದಾಯಗಳ ನಡುವಿನ ಪ್ರತ್ಯಕ್ಷ ಹಾಗೂ ನೈಜ  ಕಾಳಗ. ನಮ್ಮ  ಕುತೂಹಲ ಮತ್ತು ನಿರೀಕ್ಷೆಗೆ ಎಲ್ಲೆಯೇ ಇರಲಿಲ್ಲ.

ಮೊದಲೇ ನಿಗದಿ ಮಾಡಿದ ದಿನ ಬಂಟರ ಸೇನೆ ಹೊಕ್ಕಳಿಕೆಗೆ ಆಗಮಿಸಿತೆಂದು ತಿಳಿದು ಬಂತು. ಆದರೆ ನಾವೆಣಿಸಿದಂತೆ ಅದನ್ನು ಎದುರಿಸಲು ಮರಾಠಿ ಸೇನೆಯ ಯಾವ ಸೈನಿಕನೂ ಊರಿನವರ ಕಣ್ಣಿಗೆ ಬೀಳಲಿಲ್ಲ. ಕಾರಣವಿಷ್ಟೇ. ಅವರೆಲ್ಲಾ ಊರಿನಿಂದ ಪರಾರಿಯಾಗಿದ್ದರು!  ಬಂಟರ ಸೇನೆಯ ಮುಖ್ಯಸ್ಥರು ಊರಿನ ಹಿರಿಯರೊಡನೆ ರಾಜಿ ಪಂಚಾಯಿತಿ ಮಾಡಿ ಪ್ರಸಂಗಕ್ಕೆ ಮುಕ್ತಾಯ ಹಾಡಿದರು. ಮಂಜೇಶೆಟ್ಟಿಯ ಹೋಟೆಲಿನ ಕಾಫಿ ತಿಂಡಿ ಮುಗಿಸಿ ಬಂಟರ ಸೇನೆ ಹಿಂದಿರುಗಿತು.

ಕಮ್ಮರಡಿ ಜೋಯಿಸರ ದಿವ್ಯಔಷಧಿ
ಅಕ್ಕನಿಗೆ ಮದುವೆಯಾಗಿ ನಾಲ್ಕು ವರ್ಷಗಳ ಮೇಲಾದರೂ ಮಕ್ಕಳಾಗಲಿಲ್ಲವೆಂಬ ಕೊರಗು ಇತ್ತು. ಭಾವನವರಿಗೆ ಯಾರ ಮೂಲಕವೋ ಕಮ್ಮರಡಿ ಜೋಯಿಸರೊಬ್ಬರು ಸಂತಾನ ಮುಂದುವರೆಯುವ ಹಾಗೆ ಸ್ತ್ರೀಯರಿಗೆ ಔಷಧ ಕೊಡುವುದರಲ್ಲಿ ಪ್ರವೀಣರಾಗಿದ್ದರೆಂದು ತಿಳಿದು ಬಂತು. ಭಾವನವರ ಕೋರಿಕೆಯ ಮೇರೆಗೆ ಒಂದು ದಿನ ಜೋಯಿಸರು ಮನೆಗೆ ಆಗಮಿಸಿದರು. ಆಜಾನುಬಾಹು ಜೋಯಿಸರ ವ್ಯಕ್ತಿತ್ವ ಅವರ ಪಾಂಡಿತ್ಯವನ್ನು ಪ್ರದರ್ಶಿಸುವಂತಿತ್ತು.

ಜೋಯಿಸರು ಅಕ್ಕನೊಡನೆ ಕೆಲವು ಪ್ರಶ್ನೆಗಳನ್ನು ಅವಳೊಬ್ಬಳನ್ನೇ ಕೂರಿಸಿ ಕೇಳಬೇಕೆಂದು ಹೇಳಿದರು. ಅದಕ್ಕಾಗಿ ಉಪ್ಪರಿಗೆಯ ಮೇಲೆ ಜೋಯಿಸರನ್ನು ಕೂರಿಸಿ ಅಲ್ಲಿಗೆ ಅಕ್ಕನನ್ನು ಕಳಿಸಲಾಯಿತು. ಅಕ್ಕನಿಗೆ ಅದೊಂದು ಅಗ್ನಿ ಪರೀಕ್ಷೆಯೇ ಅನಿಸಿರಬೇಕು.  ಅಕ್ಕ ಸ್ವಲ್ಪ ಅಂಜಿಕೆ ಮತ್ತು ನಾಚಿಕೆಯಿಂದ ಉಪ್ಪರಿಗೆ ಮೆಟ್ಟಲು ಹತ್ತಿ ಹೋದದ್ದು ಈಗಲೂ ನನ್ನ ಕಣ್ಣ ಮುಂದೆ ಕಾಣಿಸಿದಂತಾಗುತ್ತಿದೆ. ಕೇವಲ ಐದು ನಿಮಿಷಗಳಲ್ಲಿ ಅಕ್ಕ ಮೌಖಿಕ  ಪರೀಕ್ಷೆ ಮುಗಿಸಿ ವಾಪಾಸ್ ಬಂದಳು. ಜೋಯಿಸರಿಂದ ಅಕ್ಕನಿಗೆ ಸೂಕ್ತವಾದ ಔಷಧ ಕೊಡಲಾಯಿತು. ಆಮೇಲೆ ಬೇಗನೆ ಅಕ್ಕ ಗರ್ಭಿಣಿ ಎಂದು ಗೊತ್ತಾಯಿತು. ಹೊಕ್ಕಳಿಕೆಯಲ್ಲೇ ಇನ್ನೊಬ್ಬರಿಗೂ ಜೋಯಿಸರ ಔಷಧಿ ತೆಗೆದುಕೊಂಡ ನಂತರ ಸಂತಾನ ಪ್ರಾಪ್ತಿಯಾಯಿತು. ಜೋಯಿಸರ ಪ್ರವೀಣತೆ ತುಂಬಾ ಉನ್ನತ ಮಟ್ಟದ್ದಾಗಿತ್ತು.

ರುಕ್ಮಿಣಕ್ಕನ ಮದುವೆ
ನಮ್ಮ ಎರಡನೇ ಅಕ್ಕನಾದ  ರುಕ್ಮಿಣಕ್ಕ ಮದುವೆಯ ವಯಸ್ಸಿಗೆ ಬಂದಿದ್ದಳು. ನಮ್ಮ ದೃಷ್ಟಿಯಲ್ಲಿ ರುಕ್ಮಿಣಕ್ಕನಷ್ಟು ಸುಂದರಿ ನಮ್ಮ ಊರಿನಲ್ಲಿ ಬೇರೆ ಯಾರೂ ಇರಲಿಲ್ಲ. ಅಲ್ಲದೇ ಮನೆ ಕೆಲಸಗಳಲ್ಲಿ ಅಕ್ಕ ತುಂಬಾ ಹುಷಾರಿ. ನಮಗೆಲ್ಲಾ ಆಗಾಗ ಅಕ್ಕನಿಂದ ಪೆಟ್ಟುಗಳು ಬೀಳುತ್ತಿದ್ದರೂ ನಮಗೆ ಅವಳ ಮೇಲೆ  ಪ್ರೀತಿ ಏನೂ ಕಡಿಮೆಯಿರಲಿಲ್ಲ.  ಒಂದು ಬಾರಿ ಅಕ್ಕನನ್ನು ನೋಡಲು ಹೊಸನಗರದ ಕಡೆಯಿಂದ ಒಂದು ಗಂಡು ತನ್ನ ಸ್ನೇಹಿತರು ಮತ್ತು ಮನೆಯವರೊಡನೆ ಬಂದಿದ್ದ.  ದಿನಗಳಲ್ಲಿ ಗಂಡಸರು ಕೇವಲ ಎರಡು ಗುಂಡಿಗಳಿದ್ದ ಶರ್ಟ್ ಧರಿಸುವುದು ಮಾಮೂಲಾಗಿತ್ತು. ಆದರೆ ಗಂಡು ಏಳೆಂಟು ಗುಂಡಿಗಳಿದ್ದ ದಿನಗಳಲ್ಲಿ ರೂಢಿಯಿಲ್ಲದ ಬುಷ್ ಶರ್ಟ್ ಧರಿಸಿದ್ದ.  ಮಧ್ಯಾಹ್ನದ ವೇಳೆಗೆ ಬಂದ ಅವರನ್ನು ಊಟಕ್ಕೆ ಎಬ್ಬಿಸಲಾಯಿತು.  ಊಟಕ್ಕೆ ಶರ್ಟ್ ತೆಗೆದು ಬರಲೇ ಬೇಕಾಗಿತ್ತು. ಬೇರೆಲ್ಲರೂ ಶರ್ಟ್ ತೆಗೆದು ಊಟಕ್ಕೆ ಬಂದರೂ ಗಂಡಿಗೆ ತನ್ನ ಹೊಸ ಶರ್ಟಿನ ಗುಂಡಿಗಳನ್ನು ತೆಗೆದು ಮುಗಿಯಲೇ ಇಲ್ಲ. ಅವನ ಒದ್ದಾಟ ನೋಡಿ ನಮಗೆ ನಗೆ ತಡೆಯಲಾರದೇ ಮನೆಯಿಂದ ಹೊರಗೆ ಓಡಿ ಬಿಟ್ಟೆವು. ನಮ್ಮ ದೃಷ್ಟಿಯಲ್ಲಿ ಅವನು ಅಕ್ಕನಿಗೆ ಸರಿಯಾದ ಗಂಡು ಅನಿಸಲಿಲ್ಲ. ಒಟ್ಟಿನಲ್ಲಿ ಸಂಬಂಧ ಕೂಡಿ ಬರಲೂ ಇಲ್ಲ. 
ಹೊಸಮನೆ ಸಂಬಂಧ
ನಾನು ಹೊಕ್ಕಳಿಕೆಯಲ್ಲಿ ಇದ್ದಾಗಲೇ ರುಕ್ಮಿಣಕ್ಕನಿಗೆ ಹೊಸಮನೆ ತಿಮ್ಮಪ್ಪಯ್ಯನವರ ಹಿರಿಯ ಮಗ ಶ್ರೀನಿವಾಸಯ್ಯನೊಡನೆ ಮದುವೆಯ ಪ್ರಸ್ತಾಪ ಬಂತು.  ವಿಚಿತ್ರವೆಂದರೆ ಹೆಣ್ಣು ನೋಡುವುದಕ್ಕೆ ನಮ್ಮ ಮನೆಗೆ ತಿಮ್ಮಪ್ಪಯ್ಯ ಬಂದಾಗ ಅವರೊಡನೆ ಮದುವೆಯ ಗಂಡು ಶ್ರೀನಿವಾಸಯ್ಯನೇ  ಇರಲಿಲ್ಲ.  ಹಾಗಾಗಿ ವಧು ವರ  ಇಬ್ಬರೂ ಪರಸ್ಪರ ಭೇಟಿಯಾಗಲೇ ಇಲ್ಲ. ಆದರೆ ತಿಮ್ಮಪ್ಪಯ್ಯನವರು ವಧು ಪರೀಕ್ಷೆ ಮುಗಿಸಿ ವಧು-ವರ ಜೋಡಿ ಚೆನ್ನಾಗಿದೆ ಎಂದು ತೀರ್ಮಾನ ಮಾಡಿಬಿಟ್ಟರು. ನಮಗೆ ರುಕ್ಮಿಣಕ್ಕ ಮತ್ತು ಭಾವ ಮದುವೆಯ ಮುಂಚೆ ಒಬ್ಬರನ್ನೊಬ್ಬರು ನೋಡಿದ್ದರೇ ಎಂದು ಗೊತ್ತಾಗಲೇ ಇಲ್ಲ. ರುಕ್ಮಿಣಕ್ಕ ಗೌರಕ್ಕನ ಮನೆಗೆ ಹೋಗಿದ್ದಾಗ ಪ್ರಾಯಶಃ ಒಬ್ಬರನ್ನೊಬ್ಬರು ನೋಡಿರುವ ಸಾಧ್ಯತೆ ಇತ್ತು.
----ಮುಂದುವರಿಯುವುದು ---

Thursday, March 15, 2018

ಒಂದು ಊರಿನ ಕಥೆ - 6 (ಹೊಕ್ಕಳಿಕೆ)


ನಾನು ವಿಷ್ಣುಮೂರ್ತಿಯೊಡನೆ ಬಸವಾನಿ ಮಾಧ್ಯಮಿಕ ಶಾಲೆಗೆ ಹೋಗತೊಡಗಿದೆ. ಅದೇ ಕಾಲಕ್ಕೆ ಹೊಕ್ಕಳಿಕೆ ಶಾಲೆಗೆ ಡೋಂಗರೆಯವರ ಜಾಗಕ್ಕೆ ನಾಗೇಶಭಟ್ಟರೆಂಬ ಹೊಸ ಮೇಷ್ಟರೊಬ್ಬರ ಆಗಮನವಾಯಿತು. ಅವರು ಕೂಡಾ ವಿಶ್ವೇಶ್ವರಯ್ಯನವರಂತೆ ನಾರ್ವೆ ಊರಿನವರೇ ಆಗಿದ್ದರು. ಯಥಾ ಪ್ರಕಾರ ನಾಗೇಶಭಟ್ಟರಿಗೆ ಕೂಡ ಊರಿನ ಎಲ್ಲ ಮನೆಗಳಲ್ಲೂ ೧೫ ದಿನ ಸರದಿಯ ಮೇಲೆ ವಾಸಮಾಡುವ ಪದ್ಧತಿ ಮುಂದುವರೆಯಿತು. ಮೇಷ್ಟರು ಪ್ರತಿ ಶನಿವಾರ ಸಂಜೆ ನಾರ್ವೆಗೆ ಹೋಗಿ ಸೋಮವಾರ ಕೆಲಸಕ್ಕೆ ಹಾಜರಾಗುತ್ತಿದ್ದರು. ಅವರ ಪಯಣ ಕಾಲ್ನಡುಗೆಯ ಮೂಲಕ. ಅಲ್ಲದೇ ಅವರು ಹೊಕ್ಕಳಿಕೆ ಊರಿನಲ್ಲಿ ಒಂದು ಪೈಸೆ ಕೂಡ ಖರ್ಚು ಮಾಡುವ ಅವಕಾಶವಿರಲಿಲ್ಲ. ಹಾಗಾಗಿ ಆ ಕಾಲಕ್ಕೆ ಮೇಷ್ಟರ ಕೈಗೆ ಬರುತ್ತಿದ್ದ ೩೦ ರೂಪಾಯಿ ತಿಂಗಳ ಸಂಬಳದಲ್ಲೂ ಒಂದು ಆಕರ್ಷಣೆ ಇತ್ತು ಅನಿಸುತ್ತಿದೆ.

ಭಾವನ ಹಿರಿಯ ಮಗ ಮಂಜಪ್ಪ ಹೊಕ್ಕಳಿಕೆ ಶಾಲೆಯಲ್ಲಿ ೪ನೇ ತರಗತಿಯಲ್ಲಿ ಓದುತ್ತಿದ್ದ. ಅವನ ಸಹಪಾಠಿಗಳೆಂದರೆ ಫಣಿಯಪ್ಪಯ್ಯನವರ ಮೂರನೇ ಮಗ ಪುರುಷೋತ್ತಮ, ಸದಾಶಿವಯ್ಯನವರ ಹಿರಿಯ ಮಗ ರಾಮಚಂದ್ರ, ಕೃಷ್ಣಯ್ಯನವರ ಹಿರಿಯ ಮಗ ರಾಮಚಂದ್ರ, ಜನಾರ್ಧನಯ್ಯನವರ ಹಿರಿಯ ಮಗ ನಾಗರಾಜ ಮತ್ತು ಅಚ್ಯುತಯ್ಯನವರ ಮನೆಯಲ್ಲಿ ಇದ್ದ ನರ್ಜಿಯ ವೆಂಕಟ್ರಾಯ ಎಂಬ ಹುಡುಗ. ಬಹು ಬೇಗನೆ ಇವರೆಲ್ಲಾ ನನ್ನ ಸ್ನೇಹಿತರಾದರು. ನನಗೆ ಆಗ ಕಬಡ್ಡಿ ಮತ್ತು ಕುಂಟಾಟದ ಹುಚ್ಚು ತುಂಬಾ ಇತ್ತು. ವಿಷ್ಣುಮೂರ್ತಿ ನಮ್ಮೆಲ್ಲರಿಗಿಂತಲೂ ಸ್ವಲ್ಪ ದೊಡ್ಡವನಾಗಿದ್ದರಿಂದ ಯಾರೊಡನೆಯೂ ಸೇರುತ್ತಿರಲಿಲ್ಲ. ಮತ್ತೂ ಯಾವ ಆಟಗಳಲ್ಲೂ ಭಾಗವಹಿಸುತ್ತಿರಲಿಲ್ಲ.  ನಾನು ಮೇಲೆ ಹೇಳಿದ ಹುಡುಗರೊಟ್ಟಿಗೆ ಇನ್ನು ಕೆಲವರನ್ನು ಸೇರಿಸಿ ಒಂದು ಆಟದ ತಂಡವನ್ನು ತಯಾರಿ ಮಾಡಿಬಿಟ್ಟೆ. ನಮ್ಮ ತಂಡದವರು ಊರಿನಲ್ಲಿ ನಡೆಯುತ್ತಿದ್ದ ಸಮಾರಂಭಗಳಲ್ಲಿ ಊಟ ಮುಗಿದನಂತರ ಕಬಡ್ಡಿ ಆಡುವುದು ಮಾಮೂಲಾಗಿ ಬಿಟ್ಟಿತು. ನಾನು ಅದಕ್ಕಾಗಿ ಅಕ್ಕನಿಂದ ಹಲವು ಬಾರಿ ಬೈಸಿಕೊಂಡರೂ ನನ್ನ ಆಟದ ಹುಚ್ಚು ನಿಲ್ಲಲಿಲ್ಲ.

ಗುಂಡಾಚಾರಿಯ ಇಂಗ್ಲಿಷ್ ಹೆಸರು!
ಗುಂಡಾಚಾರಿ ನನ್ನ ಭಾವನ ಒಕ್ಕಲಾಗಿದ್ದ. ಅಂದರೆ ಭಾವನವರ ಸ್ವಲ್ಪ ಗದ್ದೆಯನ್ನು ಗೇಣಿ ಮಾಡುತ್ತಿದ್ದ. ಜೊತೆಗೆ ತನ್ನ ಕುಲ ಕಸುಬಾದ ಬಡಗಿ ಕೆಲಸವನ್ನೂ ಮಾಡುತ್ತಿದ್ದ. ಅವನಿಗೆ ನಾವು ಕಲಿಯುತ್ತಿದ್ದ ಇಂಗ್ಲಿಷ್ ಭಾಷೆಯ ಮೇಲೆ ವಿಶೇಷ ಆಸಕ್ತಿ ಇತ್ತು. ನನ್ನ ಓದಿನ ಬಗ್ಗೆ ಮಾತಾಡುತ್ತಾ ಅವನು ಒಂದು ದಿನ ನನ್ನನ್ನು ಇಕ್ಕಟ್ಟಿಗೆ ಸಿಕ್ಕಿಸಿಬಿಟ್ಟ. ವಿಷಯ ಇಷ್ಟೇ. ಅವನಿಗೆ ತನ್ನ ಹೆಸರು ಇಂಗ್ಲಿಷ್ ಭಾಷೆಯಲ್ಲಿ ಏನೆಂದು ತಿಳಿದುಕೊಳ್ಳ ಬೇಕಿತ್ತು!  ನಾನು ಅವನಿಗೆ ಯಾರ ಹೆಸರೂ ಇಂಗ್ಲಿಷ್ ಭಾಷೆಯಲ್ಲಿ ಬದಲಾಗುವುದಿಲ್ಲವೆಂದು ಎಷ್ಟು ಹೇಳಿದರೂ ಅವನಿಗೆ ಒಪ್ಪಿಗೆಯಾಗಲಿಲ್ಲ. ಕೊನೆಗೆ ಅವನು ನನ್ನಿಂದ ಗುಂಡ ಮತ್ತು ಆಚಾರಿ ಎಂಬ ಪದಗಳಿಗೆ ಇಂಗ್ಲಿಷ್ ಪದಗಳನ್ನು ತಿಳಿಯ ಬಯಸಿದ. ನಾನು ಅವನಿಗೆ Round ಮತ್ತು Carpenter ಎಂಬ ಪದಗಳನ್ನು ಹೇಳಿದ ಮೇಲೆ ತೃಪ್ತಿಯಿಂದ ಹೊರಟು ಹೋದ!

ಕಮಲ ಶೆಡ್ತಿಯ ಕಜ್ಜಿ ಔಷಧಿ!
ಕಮಲ ಶೆಡ್ತಿ ದಕ್ಷಿಣ ಕನ್ನಡದಿಂದ ಕೆಲಸಮಾಡಲು ಘಟ್ಟದ ಮೇಲೆ ಬಂದ ಗಟ್ಟಿ  ಹೆಂಗಸು. ವಿಧವೆಯಾಗಿದ್ದ ಅವಳು ತನ್ನ ನಾಲ್ಕು ಮಕ್ಕಳನ್ನು ತನ್ನ ಸ್ವಂತ ದುಡಿಮೆಯಿಂದ ಸಾಕಿ ಬೆಳೆಸಿದ್ದಳು. ಹೊಕ್ಕಳಿಕೆಯಿಂದ ಹೊಸಮನೆಗೆ ಹೋಗುವ ದಾರಿಯಲ್ಲಿ ಅವಳ ಸಣ್ಣ ಮನೆ ಇತ್ತು. ಅವಳು ಭಾವನವರ ಮನೆಯಲ್ಲಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದಳು. ಅಕ್ಕನ ಮನೆಗೆ ಹೋದ ಸ್ವಲ್ಪ ಸಮಯದ ನಂತರ ನನಗೆ ಕಾಲುಗಳಲ್ಲಿ ಕಜ್ಜಿ ಕಾಟ ಪ್ರಾರಂಭವಾಯಿತು. ಆ ಕಾಲದಲ್ಲಿ ಪ್ರಸಿದ್ಧವಾಗಿದ್ದ ಸೈಬಾಲ್ ಎಂಬ ಮುಲಾಮನ್ನು ಹಚ್ಚಿ ಕೊಂಡರೂ ಏನೂ ಸುಧಾರಣೆಯಾಗಲಿಲ್ಲ. ಅಕ್ಕನಿಂದ ಕಮಲ ಶೆಡ್ತಿಯ ಹತ್ತಿರ ಇದಕ್ಕೆಲ್ಲ ಸೊಪ್ಪಿನ ಔಷಧಿ ಇರುವುದೆಂದು ತಿಳಿದು ಬಂತು. ನಾನು ಒಪ್ಪಿದ ನಂತರ ಶೆಡ್ತಿ ಒಂದು ದಿನ ಸೊಪ್ಪಿನೊಂದಿಗೆ ಆಗಮಿಸಿದಳು. ಅವಳು ಹೇಳಿದಂತೆ ಅಕ್ಕ ಸೊಪ್ಪಿನ ರಸ ತಯಾರುಮಾಡಿದಳು. ನಾನು ಅದನ್ನು ಕೇವಲ ಕಜ್ಜಿಯ ಮೇಲೆ ಹಚ್ಚಿಕೊಳ್ಳಬೇಕೆಂದು ಭಾವಿಸಿದ್ದೆ. ಆದರೆ ಶೆಡ್ತಿಯ ಪ್ರಕಾರ ನಾನು ಒಂದು ಮಿಳ್ಳೆಯಷ್ಟು ರಸವನ್ನು ದಿನಕ್ಕೆ ಎರಡು ಬಾರಿ ಕುಡಿಯ ಬೇಕಿತ್ತು! ನಿರ್ವಾಹವಿಲ್ಲದೆ ನಾನು ಕಟ್ಟ  ಕಹಿಯಾಗಿದ್ದ ಆ ರಸವನ್ನು ಕಣ್ಣು ಮುಚ್ಚಿಕೊಂಡು ಕುಡಿಯ ತೊಡಗಿದೆ. ನೀವು ನಂಬಿದರೆ ನಂಬಿ. ಬಿಟ್ಟರೆ ಬಿಡಿ. ಕೇವಲ ಒಂದು ವಾರದಲ್ಲಿ ನನ್ನ ಕಾಲಿನ ಕಜ್ಜಿಗಳೆಲ್ಲಾ ಒಣಗಿ ಉದುರಿ ಹೋಗಿ ಕಾಲುಗಳು ಮೊದಲಿನಂತಾದವು!

ಕಾಳು, ಕರ್ಕು, ಚೀನ್ಕ್ರಾ ಮತ್ತು ಗ್ವಾನ್ಕ್ರಾ
ಕಮಲ ಶೆಡ್ತಿಯು ತನ್ನ ನಾಲ್ಕು ಮಕ್ಕಳ ಹೆಸರುಗಳನ್ನು ತುಂಬಾ ಸ್ವಾರಸ್ಯವಾಗಿ ಹಾಗೂ ಪ್ರಾಸಬದ್ಧವಾಗಿ ಇಟ್ಟಿದ್ದಳು. ಮೊದಲನೆಯವನ ಹೆಸರು ಕಾಳು, ಎರಡನೆಯವಳು ಕರ್ಕು, ಮೂರನೆಯವನು ಗ್ವಾನ್ಕ್ರಾಮತ್ತು ಕಿರಿಯವನು ಚೀನ್ಕ್ರಾ. ಕಾಳು ಮತ್ತು ಕರ್ಕು ಪ್ರಾಯಶಃ ಶಾಲೆಗೆ ಹೋಗಲೇ ಇಲ್ಲ.  ಕಾಳು ಕೂಲಿ ಕೆಲಸ ಮತ್ತು ಸ್ವಲ್ಪ ಗದ್ದೆ ಗೇಣಿ ಮಾಡುತ್ತಿದ್ದ. ಕರ್ಕು ಅಮ್ಮನೊಡನೆ ಅಕ್ಕನ ಮನೆ ಕೆಲಸಕ್ಕೆ ಬರುತ್ತಿದ್ದಳು.  ಗ್ವಾನ್ಕ್ರಾ ಮತ್ತು ಚೀನ್ಕ್ರಾ  ಇಬ್ಬರನ್ನೂ ಹೊಕ್ಕಳಿಕೆ ಶಾಲೆಗೆ ಸೇರಿಸುವಾಗ ಹೆಸರನ್ನು ಬದಲಾಯಿಸಿ ಕ್ರಮವಾಗಿ ರಾಮಶೆಟ್ಟಿ ಮತ್ತು ಕೃಷ್ಣಶೆಟ್ಟಿ ಎಂದು ಮಾಡಲಾಯಿತು. ರಾಮಶೆಟ್ಟಿಯ ಓದು ಬೇಗನೆ ನಿಂತು ಹೋಯಿತು. ಆದರೆ ಕೃಷ್ಣಶೆಟ್ಟಿ ಚೆನ್ನಾಗಿ ಓದಿ SSLC ಪಾಸು ಮಾಡಿ ಹೊಸನಗರದಲ್ಲಿ ಶಾಲೆಯ ಮೇಷ್ಟರಾಗಿ ಬಿಟ್ಟ.

ಕಾಳುಶೆಟ್ಟಿ ಬಚ್ಚಣಿಕೆ ಕೊರಗಶೆಟ್ಟಿ ಎಂಬ ಶ್ರೀಮಂತ ಜಮೀನ್ದಾರರ ಮಗಳನ್ನು ಮದುವೆಯಾಗಿ ಸ್ವಲ್ಪ ಉನ್ನತ ಮಟ್ಟಕ್ಕೇರಿ ಬಿಟ್ಟ. ಕರ್ಕುವಿನ ಹೆಸರು ಬದಲಾಗಲೂ ಇಲ್ಲ ಮತ್ತು ಮದುವೆಯಾಗಿ ಗಂಡನ ಮನೆ ಸೇರಿದವಳು ಯಾವುದೋ ಕಾರಣದಿಂದ ಅಣ್ಣನ ಮನೆಗೆ ವಾಪಾಸ್ ಬಂದು ಬಿಟ್ಟಳು. ನಾನು ಎಷ್ಟೋ ವರ್ಷದ ನಂತರ ಅವಳು ರುಕ್ಮಿಣಕ್ಕನ ಹೊಸಮನೆಯಲ್ಲಿ ಮನೆ ಕೆಲಸ ಮಾಡುವುದನ್ನು ನೋಡಿದೆ. ಆಮೇಲೆ ಅವಳೇನಾದಳೋ ಗೊತ್ತಾಗಲಿಲ್ಲ.

ಕೃಷ್ಣಾಚಾರಿ
ಕೃಷ್ಣಾಚಾರಿ ಗುಂಡಾಚಾರಿಯ ಮಗ. ಓದಿನಲ್ಲಿ ಬುದ್ಧಿವಂತನಾಗಿದ್ದ ಅವನು ಡಿಪ್ಲೋಮ ಪಾಸ್ ಮಾಡಿ ಮುಂಬಯಿನಲ್ಲಿ ಲಾರ್ಸೆನ್ & ಟೌಬ್ರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಾನು ಬೊಂಬಾಯಿಯ ಸಾಂಟಾ ಕ್ರೂಜ್ ಎಂಬಲ್ಲಿ ವಾಸ ಮಾಡುತ್ತಿದ್ದಾಗ ಹಲವು ಬಾರಿ ನಮ್ಮ ಮನೆಗೆ ಬಂದು ಹೋಗುತ್ತಿದ್ದ. ಆಮೇಲೆ ಹೆಚ್ಚಿನ ಹಣ ದುಡಿಯಬೇಕೆಂದು ದುಬೈಗೆ ಹೋಗಿದ್ದ. ಅವನು ಆಗಾಗ ಊರಿಗೆ ಬಂದು ತನ್ನ ಸಂಸಾರಕ್ಕೆ ತುಂಬಾ ಹಣ ಸಹಾಯ ಮಾಡುತ್ತಿದ್ದನಂತೆ. ಆದರೆ ದುರದೃಷ್ಟವಶಾತ್ ಅವನು ಯಾವುದೊ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡನೆಂದು ಅಕ್ಕನಿಂದ ತಿಳಿಯಿತು.

ಆಳುಗಳ ಬಿಡಾರ
ಅಕ್ಕನ ಮನೆಯ ಮುಂದೆ ರಸ್ತೆಯ ಮೇಲ್ಭಾಗದಲ್ಲಿ ಆಳುಗಳಿಗಾಗಿ ಒಂದು ಕೊಟ್ಟಿಗೆಯಲ್ಲಿ ಹಲವು ಬಿಡಾರಗಳನ್ನು ಕಟ್ಟಲಾಗಿತ್ತು. ಅವುಗಳಲ್ಲಿ ದಕ್ಷಿಣ ಕನ್ನಡದಿಂದ ವಲಸೆ ಬಂದ ಹಲವು ಕುಟುಂಬಗಳು ವಾಸ ಮಾಡುತ್ತಿದ್ದವು.  ನನಗೆ ಹಿರಿಯನಾಯ್ಕ, ನಕ್ರ ನಾಯ್ಕ ಮತ್ತು ಶೀನನಾಯ್ಕ ಎಂಬುವರ ಹೆಸರುಗಳು ನೆನಪಿಗೆ ಬರುತ್ತಿವೆ. ನಕ್ರ ನಾಯ್ಕ ಹಿರಿಯನಾಯ್ಕನ ಅಕ್ಕನ ಮಗ. ತರುಣನಾಗಿದ್ದ ಅವನು ಗಾಡಿಹೊಡೆಯುವನಾಗಿ ನೇಮಕನಾಗಿದ್ದ. ಸ್ವಲ್ಪ ದಿನಗಳ ನಂತರ ಅವನು ಊರಿಗೆ ಹೋಗಿ ಮದುವೆ ಮಾಡಿಕೊಂಡು ಹೆಂಡತಿಯೊಡನೆ ವಾಪಾಸ್ ಬಂದ. ಅವನಿಗೆ ಪ್ರತ್ಯೇಕ ಬಿಡಾರ ಏರ್ಪಾಟು ಮಾಡಲಾಯಿತು. ನಕ್ರನ  ಹೆಂಡತಿ ಅವನಷ್ಟು ಚೆಂದ ಇರಲಿಲ್ಲವೆಂಬ ಅಭಿಪ್ರಾಯ ಬಂತು. ಅವಳೂ ಕೂಡ ಭಾವನ ಮನೆಗೆ ಕೆಲಸಕ್ಕೆ ಬರಲಾರಂಭಿಸಿದಳು.

ಶೀನನ ಹೆಂಡತಿ ಲಕ್ಷ್ಮಿ. ಶೀನ ಸ್ವಲ್ಪ ಮಂಕುದಿಣ್ಣೆಯಾಗಿದ್ದ. ಶೀನ-ಲಕ್ಷ್ಮಿ ಜೋಡಿಗೆ ಗುಂಡನೆಂಬ ಮಗನಿದ್ದ.  ಶುದ್ಧ ಉಂಡಾಡಿ ಗುಂಡನೇ ಆಗಿದ್ದ ಗುಂಡ ಶಾಲೆಗೆ ಹೋಗಲೇ ಇಲ್ಲ. ಅಪಾಪೋಲಿಯಾಗಿದ್ದ ಅವನು  ಚಿಕ್ಕ ಪುಟ್ಟ ಕಳ್ಳತನ, ಜಗಳ ಇತ್ಯಾದಿಗಳಲ್ಲಿ ತೊಡಗಿರುತ್ತಿದ್ದ. ಒಮ್ಮೆ ಕೃಷ್ಣಮೂರ್ತಿ ಭಾವನ ಹೆಂಡತಿ ಗೋಪಿಯಿಂದ ಚೆನ್ನಾಗಿ  ಚೆಚ್ಚಿಸಿಕೊಂಡಿದ್ದ. ಶೀನನಿಗೆ ಮಗನ  ಮೇಲೆ ಹಿಡಿತವಿರಲಿ, ಸ್ವಲ್ಪ ಸುಂದರಿಯಾಗಿದ್ದ ತನ್ನ ಹೆಂಡತಿ ಲಕ್ಷ್ಮಿಯ ಮೇಲೆ ಕೂಡ ಸ್ವಲ್ಪವೂ ಹಿಡಿತವಿರಲಿಲ್ಲ. ಅದರ ಪರಿಣಾಮವನ್ನು ಬೇಗನೆ ಎದುರಿಸ ಬೇಕಾಗಿ ಬಂತು.
----ಮುಂದುವರಿಯುವುದು ---

Friday, March 9, 2018

ಒಂದು ಊರಿನ ಕಥೆ - 5 (ಹೊಕ್ಕಳಿಕೆ)


ನಮ್ಮ ಊರಿನ ಶಾಲೆಗೆ ಸುಬ್ಬಾಭಟ್ಟರ ನಂತರ ನಾರ್ವೆಯ ವಿಶ್ವೇಶ್ವರಯ್ಯನವರು ಮೇಷ್ಟರಾಗಿ ಬಂದರು. ಅವರು ನನಗೆ ೫ನೇ ತರಗತಿಗೆ ಪ್ರೈವೇಟ್ ಪಾಠ ಮಾಡಿ ನಾರ್ವೆ ಮಿಡ್ಲ್ ಸ್ಕೂಲ್ನಲ್ಲಿ ಪರೀಕ್ಷೆ ಕಟ್ಟಿಸಿದರು. ಹೆಡ್ ಮಾಸ್ಟರ್ ಹಿರಣ್ಣಯ್ಯನವರು ನಾನು ಎಲ್ಲ ವಿಷಯಗಳಲ್ಲೂ (subjects) ತರಗತಿಗೆ ಪ್ರಥಮನಾಗಿ ಬಂದಿದ್ದೇನೆಂದು ಪ್ರಕಟಿಸಿ ಬಿಟ್ಟರು. ನಾರ್ವೆಯಲ್ಲಿ ನಾನು ಮೇಷ್ಟರ ಮನೆಯಲ್ಲಿ ಕಳೆದ ಎರಡು ವಾರಗಳು ನನ್ನ ಜೀವನದ ಅತ್ಯಂತ ಅಮೂಲ್ಯ ದಿನಗಳಾಗಿದ್ದವು. ನಾರ್ವೆ ಊರಿನ ಜನಗಳು, ಶಾಲೆಯ ಮೇಷ್ಟರು ಮತ್ತು ವಿದ್ಯಾರ್ಥಿಗಳಿಂದ ನನಗೆ ವಿಶೇಷ ಪ್ರೀತಿ ಮತ್ತು ಅಭಿಮಾನಗಳು  ದೊರೆತವು. ಅದಕ್ಕೆಲ್ಲಾ ವಿಶ್ವೇಶ್ವರಯ್ಯನವರೇ ಕಾರಣ.  ಅಷ್ಟಲ್ಲದೇ ಮೇಷ್ಟರ ಮನೆಯವರೆಲ್ಲಾ ನಾನು ಅವರ ಮನೆಯಲ್ಲೇ ಇದ್ದು ನನ್ನ ವಿದ್ಯಾಭ್ಯಾಸವನ್ನು ಮುಂದುವರೆಸಬೇಕೆಂದು ಒತ್ತಾಯ ಮಾಡಿದರು. ಹಿರಣ್ಣಯ್ಯನವರಿಗೂ ನಾನು ಅವರ ಶಾಲೆಯಲ್ಲೇ ಮುಂದೆ ಓದಬೇಕೆಂಬ ಅಭಿಪ್ರಾಯವಿತ್ತು.

ಆದರೆ ವಿಶ್ವೇಶ್ವರಯ್ಯನವರದ್ದು ತುಂಬಾ ದೊಡ್ಡ ಸಂಸಾರವಾಗಿದ್ದರಿಂದ ನಾನು ಅವರಿಗೆ ಹೊರೆಯಾಗುವುದು ನಮ್ಮ ಮನೆಯವರಿಗೆ ಇಷ್ಟವಿರಲಿಲ್ಲ. ಅಲ್ಲದೆ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ  ನಾನು ಹೊಕ್ಕಳಿಕೆಯಲ್ಲಿ ಗೌರಕ್ಕನ ಮನೆಯಲ್ಲಿದ್ದು ಗಡಿಕಲ್ ಮಾಧ್ಯಮಿಕ ಶಾಲೆಗೆ ಹೋಗುವುದೆಂದು ಆಗಲೇ ತೀರ್ಮಾನವಾಗಿ ಬಿಟ್ಟಿತ್ತು. ನನಗೆ ಅಕ್ಕನ ಮನೆಯ ಮೇಲೆ ತುಂಬಾ ಆಕರ್ಷಣೆ ಇತ್ತು. ಅದಕ್ಕೆ ವಿಶೇಷ ಕಾರಣಗಳಿದ್ದುವು. ಗೌರಕ್ಕ ರುಕ್ಮಿಣಿಕ್ಕನಂತೆ ಶಿಸ್ತಿನ ಸಿಪಾಯಿ ಆಗಿರಲಿಲ್ಲ. ಅವಳದು ತುಂಬಾ ಮೃದು ಸ್ವಭಾವ. ಅಲ್ಲದೆ ಮನೆಯಲ್ಲಿ ಹಾಲು ಮತ್ತು ಮೊಸರಿನ ಸಮೃದ್ಧಿ ಇತ್ತು. ನಮ್ಮ ಮನೆಯಲ್ಲಿದ್ದಂತೆ ಯಾವುದೇ ಕಷ್ಟದ ಕೆಲಸಗಳನ್ನು ಮಾಡುವ ಪ್ರಶ್ನೆ ಇರಲಿಲ್ಲ. ನಾನು ಹಿಂದಿನ ಬಾರಿ ಹೊಕ್ಕಳಿಕೆಗೆ ಹೋದಾಗ ಅಕ್ಕ ದೊಡ್ಡ ಸಂಸಾರದೊಡನೆ ಹಳೆಯ ಮನೆಯಲ್ಲಿದ್ದಳು. ಆದರೆ ಆಮೇಲೆ ಆಸ್ತಿ  ಪಾಲಾದ ನಂತರ ಈಗ ಪಕ್ಕದಲ್ಲೇ  ಕಟ್ಟಿದ  ಹೊಸಮನೆಯಲ್ಲಿದ್ದಳು. ಹಾಗಾಗಿ ನನಗೆ ಅವಳಿಂದ ಹೆಚ್ಚಾದ ಪ್ರೀತಿ ಮತ್ತು ಸ್ವಾತಂತ್ರ ಸಿಗಲಿತ್ತು .
0-------------------0--------------0----------------0----------------------0-----------------0-
ಆ ಬೇಸಿಗೆ ರಜದಲ್ಲಿ ನನಗೆ ಅಮ್ಮನೊಡನೆ ಒಮ್ಮೆ ಹೊಕ್ಕಳಿಕೆಗೆ ಹೋಗಿ ಬರುವ ಅವಕಾಶ ಸಿಕ್ಕಿತು. ಅಕ್ಕನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ.  ಭಾವನವರು ಊರಿನ ದೇವಸ್ಥಾನದ ಪಕ್ಕದಲ್ಲಿದ್ದ ಅಶ್ವತ್ಥ ವೃಕ್ಷಕ್ಕೆ ಉಪನಯನ ಮಾಡುವುದಾಗಿ ಹೇಳಿಕೊಂಡಿದ್ದರಂತೆ. ಆ ಸಮಾರಂಭ ತುಂಬಾ ಸಂಭ್ರಮದಿಂದ ನಡೆಯಿತು. ನಾನು ಮೊದಲ  ಬಾರಿಗೆ ಅಕ್ಕನ ಹೊಸಮನೆಗೆ ಪ್ರವೇಶ ಮಾಡಿದೆ. ಮನೆ ಆ ಕಾಲಕ್ಕೆ ತುಂಬಾ ಚೆನ್ನಾಗಿ ಮತ್ತು ಅನುಕೂಲಕ್ಕೆ ತಕ್ಕಂತೆ ಕಟ್ಟಲ್ಪಟ್ಟಿತ್ತು. ಮನೆಯ  ಪಕ್ಕದಲ್ಲಿ ಒಂದು ದೊಡ್ಡ ಕಟ್ಟಡವನ್ನು ಜಾನುವಾರು, ಗಾಡಿಎತ್ತುಗಳು, ಅಕ್ಕಿ ಮತ್ತು ಬತ್ತಗಳನ್ನು ಕೂಡಿಡಲು ಅನುಕೂಲವಾಗುವಂತೆ ಕಟ್ಟಲಾಗಿತ್ತು. ಸಮಾರಂಭದ ದಿನ ರಾತ್ರಿ ಈ ಕಟ್ಟಡದ ಒಂದು ರೂಮಿನಲ್ಲಿ ಹೆಣ್ಣು ಮಕ್ಕಳೆಲ್ಲಾ ಬಾಗಿಲು ಹಾಕಿಕೊಂಡು ಹಾಡು ಹೇಳುತ್ತಿರುವುದು ಕೇಳಿಸಿತು. ನಾವು ಕಿಟಕಿಯಿಂದ ಇಣುಕಿ ನೋಡಿದಾಗ ಹುಡುಗಿಯೊಬ್ಬಳು ನರ್ತನ ಮಾಡುತ್ತಿರುವುದು ಕಾಣಿಸಿತು. ಆ ಹುಡುಗಿಯ ಹೆಸರು ರಾಧಾ ಎಂದೂ ಮತ್ತು ಅವಳು ಹುಲ್ಕುಳಿ ಸುಬ್ಬರಾಯರೆಂಬ ಶ್ರೀಮಂತರ ಮಗಳೆಂದೂ ತಿಳಿಯಿತು. ಅವಳು ತೀರ್ಥಹಳ್ಳಿಯಲ್ಲಿ ಓದುತ್ತಿದ್ದಳಂತೆ. ಆ ಕಾಲಕ್ಕೆ ಹುಡುಗಿಯೊಬ್ಬಳು ಪ್ರೌಢಶಾಲೆಯಲ್ಲಿ ಓದುವುದು ಮತ್ತು ನರ್ತನ ಮಾಡುವುದು ಎರಡೂ ತುಂಬಾ ವಿಶೇಷ  ವಿಷಯಗಳಾಗಿದ್ದವು.

ಭಾವನವರ ಸಂಬಂಧಿಗಳೆಲ್ಲಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನನಗೆ ಭಾವನ ತಂಗಿ ನರ್ಜಿ ಸೀತಮ್ಮನವರ ಮಗ ವಿಷ್ಣುಮೂರ್ತಿಯ ಪರಿಚಯ ಮಾಡಿಕೊಡಲಾಯಿತು. ಅವನೂ ಕೂಡ ನನ್ನಂತೆಯೇ ಗಡಿಕಲ್ ಮಿಡ್ಲ್ ಸ್ಕೂಲ್ನಲ್ಲಿ ಓದಲು ಹೊಕ್ಕಳಿಕೆಗೆ ಬರುವನಿದ್ದ. ನಾನು ಆರನೇ ತರಗತಿಯಾದರೆ ವಿಷ್ಣು ಏಳನೇ ತರಗತಿ. ಅವನು ಹಳೆಮನೆಯಲ್ಲಿ ಇಬ್ಬರು ಸೋದರ ಮಾವಂದಿರ (ಕೃಷ್ಣಮೂರ್ತಿ ಮತ್ತು ನಾಗೇಶಯ್ಯ) ಮನೆಯಲ್ಲಿರುವುದೆಂದು ತೀರ್ಮಾನವಾಗಿತ್ತು. ತುಂಬಾ ಸ್ಫುರದ್ರೂಪಿಯಾದ ವಿಷ್ಣುವಿನ ವಿಶೇಷವೆಂದರೆ ಅವನ ಜುಟ್ಟು. ಶಾಲೆಗೆ ಹೋಗುವ ಎಲ್ಲ ಮಕ್ಕಳೂ ಕ್ರಾಪ್ ಕಟ್ ಮಾಡಿಸಿಕೊಂಡಿರುತ್ತಿದ್ದ ಆ ದಿನಗಳಲ್ಲೂ, ವಿಷ್ಣುವಿನ ಆ ವಯಸ್ಸಿನ ಜುಟ್ಟು ಒಂದು ವಿಚಿತ್ರವೇ ಆಗಿತ್ತು!
0-------------------0--------------0----------------0----------------------0-----------------0----
ಅದು ೧೯೫೯ ನೇ ಇಸವಿಯ ಮೇ ತಿಂಗಳ ಕೊನೆಯ ವಾರ. ಅಣ್ಣ ನನಗಾಗಿ ಆಗಲೇ ೬ನೇ ತರಗತಿಯ ಪುಸ್ತಕಗಳನ್ನು ತಂದು ಬಿಟ್ಟಿದ್ದ.  ಆ ಕಾಲದಲ್ಲೇ ಅಣ್ಣನ ಸ್ನೇಹಿತರಾದ ಗೋಳಿಕಟ್ಟೆ ಕೃಷ್ಣರಾವ್ ಅವರ ಮನೆಗೆ  ಫಿಲಂ ಫೇರ್ ವಾರ ಪತ್ರಿಕೆ ಬರುತ್ತಿತ್ತು. ಅಣ್ಣ ಅದರ ಒಂದು ಕಾಪಿ ಮನೆಗೆ ತಂದ . ಉದ್ದೇಶ ಓದಲಿಕ್ಕಲ್ಲ. ನನ್ನ ಪುಸ್ತಕಗಳಿಗೆ ಬೈಂಡ್ ಮಾಡುವುದಕ್ಕೆ!  ರಾಜ್ ಕಪೂರ್, ನರ್ಗಿಸ್, ದಿಲೀಪ್ ಕುಮಾರ್, ಮಧುಬಾಲ, ಮುಂತಾದವರ ಫೋಟೋಗಳಿದ್ದ ಪತ್ರಿಕೆಯ ಪುಟಗಳು ನನ್ನ ಪುಸ್ತಕಗಳ ಹೊರಭಾಗವನ್ನು ಅಲಂಕರಿಸಿದುವು.

ಮನೆಯಿಂದ ಹೊರಟ ನಾನು ಮತ್ತು ಅಣ್ಣ ಬಸ್ಸಿನಲ್ಲಿ ಕೊಪ್ಪ ತಲುಪಿದೆವು. ಸೀದಾ  ಅಚ್ಯುತ ಭಟ್ಟರ ಅಂಗಡಿಗೆ ಹೋಗಿ ನನಗೆ ಒಂದು ಜೊತೆ ಶರ್ಟ್ ಮತ್ತು ಚೆಡ್ಡಿ ಬಟ್ಟೆಗಳನ್ನು ಖರೀದಿಸಿದೆವು. ಅದನ್ನು ಹೊಲಿಸಲು ಆ ಕಾಲಕ್ಕೆ ಕೊಪ್ಪದಲ್ಲಿ ಅತ್ಯಂತ  ಪ್ರಸಿದ್ಧನಾಗಿದ್ದ ಶೇಷಗಿರಿ ಎಂಬುವನ ಟೈಲರ್ ಶಾಪ್ ಒಳಗೆ ಪ್ರವೇಶ ಮಾಡಿದೆವು. ಶೇಷಗಿರಿಯ ಪ್ರಸಿದ್ಧಿ ಅವನ ಹೊಲಿಗೆಯ ಪ್ರವೀಣತೆಗಲ್ಲ. ಅದಕ್ಕೆ ಕಾರಣವೆ ಬೇರೆ.  ಅವನು ಯಾವುದೇ ಡ್ರೆಸ್ ಹೊಲಿಗೆಗೆ ಕೊಟ್ಟದ್ದನ್ನು ಒಪ್ಪಿಕೊಂಡ ಸಮಯಕ್ಕೆ ಹೊಲಿದು ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಸಾಮಾನ್ಯವಾಗಿ ಗೋಕುಲಾಷ್ಟಮಿಗೆ ಹಾಕಲೆಂದು ಹೊಲಿಗೆಗೆ ಕೊಟ್ಟರೆ ಮಹಾಶಿವರಾತ್ರಿಗೆ ಅದು ಸಿಗುವ ಸಾಧ್ಯತೆ ಇತ್ತು!

ಶೇಷಗಿರಿಯ ಹತ್ತಿರ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ನನ್ನ ಅಣ್ಣ ಅವನು ಬಟ್ಟೆ ಕಟ್ ಮಾಡಿ ಹೊಲಿಯಲು ಪ್ರಾರಂಭ ಮಾಡಿದ್ದನ್ನು ಕಣ್ಣಾರೆ ಕಂಡ  ಮೇಲೆಯೇ ನನ್ನನ್ನು ಒಂದು ಶೂ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ ನನಗೆ ಒಂದು ಜೊತೆ ಕ್ಯಾನ್ವಾಸ್ ಶೂ ಕೊಡಿಸಲಾಯಿತು. ನನಗೆ ನನ್ನ ಕಣ್ಣನ್ನೇ ನಂಬಲಾಗಲಿಲ್ಲ. ಏಕೆಂದರೆ ಆ ಕಾಲದಲ್ಲಿ ನಮ್ಮೂರಿನಲ್ಲಿ ಶೂ ಇರಲಿ, ಚಪ್ಪಲಿಯನ್ನು ಧರಿಸುವರೇ ವಿರಳರಾಗಿದ್ದರು. ನನಗೆ ಶೂ ಕೊಡಿಸುವ ಅಣ್ಣನ ತೀರ್ಮಾನ ಒಂದು ದೊಡ್ಡ ಕ್ರಾಂತಿಕಾರಿ ತೀರ್ಮಾನವಾಗಿತ್ತು! ಶೂ ಧರಿಸಿದ ನನ್ನನ್ನು ಅಣ್ಣ ಪುನಃ ಶೇಷಗಿರಿಯ ಅಂಗಡಿಗೆ ಕರೆದುಕೊಂಡು ಹೋದ. ಅಲ್ಲಿ ನಾನು ನನ್ನ ಹೊಸ ಡ್ರೆಸ್ ಗಳು ರೆಡಿಯಾಗುವುದನ್ನು ಕಣ್ಣಾರೆ ಗಮನಿಸಬೇಕಾಗಿತ್ತು. ಏಕೆಂದರೆ ಅಣ್ಣನಿಗೆ ಶೇಷಗಿರಿಯ ಮೇಲೆ ನಂಬಿಕೆಯೇ ಇರಲಿಲ್ಲ.

ನನ್ನ ಹೊಸ ಬಟ್ಟೆ ರೆಡಿಯಾದ ಮೇಲೆ ನಾವು ಬಸ್ ಪ್ರಯಾಣ ಮಾಡಿ ಗಡಿಕಲ್ ಎಂಬ ಊರನ್ನು ತಲುಪಿದೆವು. ನಾನು ಹಿಂದೆ ಹೊಕ್ಕಳಿಕೆಗೆ ಹೋಗುವಾಗ ಹರಿಹರಪುರ ಮಾರ್ಗವಾಗಿ ನಡೆದೇ ಹೋಗಿದ್ದೆ. ಆದರೆ ಈ ಬಾರಿ ಬಿ ಜಿ ಕಟ್ಟೆಯಿಂದ ಕೊಪ್ಪ ಮಾರ್ಗವಾಗಿ ಬಸ್ನಲ್ಲೇ ಗಡಿಕಲ್ ತಲುಪಿದ್ದೆ. ಅಲ್ಲಿಂದ ನಾವು ಎರಡು ಮೈಲಿ ಕಾಲ್ನಡಿಗೆ ಮಾಡಬೇಕಿತ್ತು. ಗಡಿಕಲ್ ಊರು ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಯಾಗಿತ್ತು. ಕನ್ನಡದ ಪ್ರಸಿದ್ಧ ಕವಿ ಕುವೆಂಪು ಅವರು ಇಲ್ಲಿಗೆ ಸಮೀಪದ ಕುಪ್ಪಳ್ಳಿಯವರು .

ಗೌರಕ್ಕನಿಗೆ ನಾನು ಅವಳ ಮನೆಯಲ್ಲೇ ಇರಲು ಬಂದದ್ದು ತುಂಬಾ ಸಂತೋಷ ಕೊಟ್ಟಿತು. ಅಲ್ಲದೆ ನಾನು ಅವಳ ಮನೆಯಲ್ಲೇ ಮೂರು ವರ್ಷ ಇರುವುದೆಂದು ಆಗಲೇ ತೀರ್ಮಾನವಾಗಿ ಬಿಟ್ಟಿತ್ತು. ಅಷ್ಟರಲ್ಲೇ ನರ್ಜಿ ವಿಷ್ಣುಮೂರ್ತಿ ಕೂಡ ಹೊಕ್ಕಳಿಕೆಗೆ ೭ನೇ ತರಗತಿ ಓದಲು ಪಕ್ಕದ ಮನೆಗೆ ಬಂದು ಬಿಟ್ಟಿದ್ದ. ಆದರೆ ಅವನನ್ನು ನಾವೆಣಿಸಿದಂತೆ ಗಡಿಕಲ್ ಶಾಲೆಗೆ ಸೇರಿಸಿರಲಿಲ್ಲ. ಬದಲಿಗೆ ತೀರ್ಥಹಳ್ಳಿ ತಾಲೂಕಿನ ಬಸವಾನಿ ಎಂಬಲ್ಲಿದ್ದ ಗವರ್ನಮೆಂಟ್ ಶಾಲೆಗೆ ಸೇರಿಸಿದ್ದರು. ಆ ಊರು ಹೊಕ್ಕಳಿಕೆಗೆ ಮೂರು ಮೈಲಿ ದೂರದಲ್ಲಿತ್ತು. ಅಲ್ಲಿನ ಶಾಲೆ ತುಂಬಾ ಪ್ರಸಿದ್ಧಿ ಪಡೆದಿತ್ತಂತೆ. ಅದನ್ನು ತಿಳಿದ ನಂತರ ನನ್ನನ್ನೂ ಅದೇ ಶಾಲೆಗೆ ಸೇರಿಸುವುದೆಂದು ತೀರ್ಮಾನಿಸಲಾಯಿತು.
----ಮುಂದುವರಿಯುವುದು ---