Monday, October 31, 2016

ನನ್ನ ಬಾಲ್ಯ

ಅಧ್ಯಾಯ
ಮಕ್ಕಳಿಗೆ ತಂದೆ ಬಾಲ್ಯದೊಳ್
ಅಕ್ಕರ ವಿದ್ಯೆಗಳನರಿಪದಿದ್ದರೆ ಕೊಂದಂ
ಲಕ್ಕಧನಮಿರಲು ಕೆಡಗುಂ
ಚಿಕ್ಕಂದಿನ ವಿದ್ಯೆ ಪೊರಗು ಚೂಡಾರತ್ನ
                                                         --ಸುಭಾಷಿತ
ನಮಗೆ ಚಿಕ್ಕಂದಿನಲ್ಲಿ ಯಾವಾಗಲೂ ತಂದೆಯವರು ದೆವ್ವಗಳ ಬಗ್ಗೆ ತೋರಿಸುತ್ತಿದ್ದ ನಿರ್ಭೀತಿ ಹಾಗೂ ಪರಾಕ್ರಮದ ಬಗ್ಗೆ ವಿಶೇಷ ಕುತೂಹಲವಿತ್ತು. ಬಗ್ಗೆ ಅವರನ್ನು ಆಗಾಗ್ಗೆ ಕೇಳುತ್ತಿದ್ದೆವು. ಅದಕ್ಕೆ ಅವರು ಅದಕ್ಕೆಲ್ಲಾ ಮನುಷ್ಯನ ಧೈರ್ಯ ಹಾಗೂ ಆತ್ಮಬಲವೇ ಮುಖ್ಯವೆಂದು ಹೇಳುತ್ತಿದ್ದರು. ಮತ್ತೂ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಕಥೆಯನ್ನೂ ಹೇಳಿದರು. ಕಥೆ  ಹೀಗಿತ್ತು:

ಹೊಸಳ್ಳಿ ಎಂಬ ಊರಿಗೆ ಹೋಗುವ ಮಾರ್ಗದಲ್ಲಿ ಒಂದು ದಟ್ಟವಾದ ಅರಣ್ಯವಿತ್ತು. ಊರಿಗೆ ಹೋಗುವ ಯಾರಿಗೂ ರಾತ್ರಿಯ ವೇಳೆ ಕಾಡಿನ ನಡುವೆ ಹೋಗುವ ಧೈರ್ಯವಿರಲಿಲ್ಲ. ಕಾರಣವಿಷ್ಟೇ. ದಾರಿಯಲ್ಲಿದ್ದ ಒಂದು ಅರಳೀ ಮರದಿಂದ ದೆವ್ವವೊಂದು ತಲೆಕೆಳಗಾಗಿ ನೇತಾಡುತ್ತಿದ್ದ ದೃಶ್ಯ ಕಣ್ಣಿಗೆ ಬೀಳುತ್ತಿತ್ತು. ಅಷ್ಟು ಮಾತ್ರವಲ್ಲ. ಅದು ಮರದ ಕೆಳಗೆ ಬರುವ ವ್ಯಕ್ತಿಗೆ ತನ್ನ ಗ್ರಾಮೀಣ ಭಾಷೆಯಲ್ಲಿ ಗಟ್ಟಿಯಾಗಿ "ಹೋತ್ರ್ಯಾ? ಹೋತ್ರ್ಯಾ? " (ಹೋಗುತ್ತೀರಾ?ಹೋಗುತ್ತೀರಾ?) ಎಂದು ಕೇಳುತ್ತಿತ್ತು. ಅದನ್ನು ಕೇಳಿದ ವ್ಯಕ್ತಿ ಮೈ ನಡುಗಿಕೊಂಡು ಅಲ್ಲಿಂದ ತಿರುಗಿ ನೋಡದೇ ಪರಾರಿ!

ಊರಿನಲ್ಲಿ ರುಕ್ಕಮ್ಮನೆಂಬ ಅಜ್ಜಿ ಒಬ್ಬಳಿದ್ದಳು. ಒಂದು ದಿನ ಅವಳ ಮನೆಗೆ ಮೊದಲ ಬಾರಿಗೆ ಅವಳ  ಮೊಮ್ಮಗನೊಬ್ಬ ಬಂದಿದ್ದ. ಅವನ ಹೆಸರು ಶೂರ. ಹೆಸರಿಗೆ ತಕ್ಕಂತೆ ತುಂಬಾ ಧರ್ಯವಂತ. ಅಜ್ಜಿಯ ಬಾಯಿಂದ ದೆವ್ವದ ಕಥೆ ಕೇಳಿದ ಶೂರ ಕೂಡಲೇ ಅದನ್ನು ನೋಡಿಯೇ ಬಿಡಬೇಕೆಂದು ತೀರ್ಮಾನಿಸಿದ. ಅಷ್ಟು ಮಾತ್ರವಲ್ಲ. ರಾತ್ರಿಯೇ ಕಾಡೊಳಗೆ ಪ್ರವೇಶ ಮಾಡಿಯೂ ಬಿಟ್ಟ. ಅವನೆಣಿಸಿದಂತೆ ದೆವ್ವ ಅವನ ಕಣ್ಣಿಗೆ ಬಿದ್ದೂ ಬಿಟ್ಟಿತು. ಮತ್ತೂ ಮಾಮೂಲಿನಂತೆ  "ಹೋತ್ರ್ಯಾ? ಹೋತ್ರ್ಯಾ? " ಎಂದು ಗಟ್ಟಿಯಾಗಿ ಕಿರುಚತೊಡಗಿತುಸ್ವಲ್ಪವೂ ಧೈರ್ಯಗೆಡದ ಶೂರ ಗಟ್ಟಿಯಾಗಿ " ಹೋತೀನಿ ಬತ್ತಿಯಾ " (ಹೌದು ನಾನು ಹೋಗುತ್ತೇನೆ. ನೀನೂ ಬರುತ್ತೀಯ?) ಎಂದು ಉತ್ತರಿಸುತ್ತಾ ಮುಂದೆ ಹೋದ. ಆಗ ಅವನಿಗೆ ಯಾರೋ ತನ್ನನ್ನು ಹಿಂಬಾಲಿಸುವುದು ಅರಿವಾಯಿತು. ಅವನು ತಿರುಗಿ ನೋಡದೆ ಸೀದಾ  ವಾಪಾಸ್ ಅಜ್ಜಿಯ ಮನೆ ಸೇರಿದ. ಅವನ ಹಿಂದೆ ಕೇಳುತ್ತಿದ್ದ ಕಾಲಿನ ಸಪ್ಪಳವೂ ನಿಂತು ಹೋದುದು ಅರಿವಾಯಿತು. ಅವನು ಹಿಂತಿರುಗಿ ನೋಡಿದಾಗ ಅವನಿಗೆ ಅಲ್ಲಿ ಚಿನ್ನದ ನಾಣ್ಯ ತುಂಬಿದ ಒಂದು ಮಡಿಕೆ ಕಾಣಿಸಿತು. ಅದು ಅವನ ಧೈರ್ಯಕ್ಕೆ ಸಿಕ್ಕಿದ ಉಡುಗರೆಯಾಗಿತ್ತು.

ನಮ್ಮ ತಂದೆಯವರ ಪ್ರಕಾರ ದೆವ್ವ ಒಬ್ಬ ಜಿಪುಣಾಗ್ರೇಸರನ ಆತ್ಮವಾಗಿತ್ತು. ಜಿಪುಣ ಯಾವುದೇ ದಾನ ಧರ್ಮ ಮಾಡದೆ ಹಣವನ್ನೆಲ್ಲ ಚಿನ್ನದ ನಾಣ್ಯವಾಗಿ ಪರಿವರ್ತಿಸಿ ಒಂದು ಮಡಿಕೆಯಲ್ಲಿ ಕೂಡಿಡುತ್ತಿದ್ದನು. ಅವನು ಸತ್ತಾಗ ದೇವರು ಅವನಿಗೆ ನಾಣ್ಯವನ್ನೆಲ್ಲಾ ಒಬ್ಬ ಧೈರ್ಯವಂತನಿಗೆ ಒಪ್ಪಿಸಬೇಕೆಂದೂ ಅಲ್ಲಿಯವರೆಗೆ ಅವನು ದೆವ್ವವಾಗಿಯೇ ಇರಬೇಕೆಂದು ಅಪ್ಪಣೆ ಮಾಡಿದನು. ಶೂರನ ಸಾಹಸಕ್ಕೆ ಮೆಚ್ಚಿ ದೆವ್ವ ನಾಣ್ಯದ ಮಡಿಕೆಯನ್ನು ಅವನ ಮನೆಗೆ ತಲುಪಿಸಿತು. ಆಗ ಅದರ ಆತ್ಮ  ದೆವ್ವದ ರೂಪದಿಂದ  ಬಿಡುಗಡೆ ಹೊಂದಿ ಸ್ವರ್ಗಕ್ಕೆ ಪ್ರಯಾಣ ಬೆಳೆಸಿತು.

ತಂದೆಯವರು ಹೇಳಿದ ಕಥೆ ನಮ್ಮನ್ನೂ ಧೈರ್ಯವಂತರಾಗಿರುವಂತೆ ಪ್ರೋತ್ಸಾಹಿಸಿತು. ನಾವೂ ಕೂಡ ಯಾವುದಾದರೂ ದೆವ್ವದಿಂದ ಚಿನ್ನದ ಮಡಿಕೆ ಸಂಪಾದಿಸಬಹುದೆಂಬ ಕನಸನ್ನು  ಕಾಣತೊಡಗಿದೆವು. ಆದರೆ ನಮ್ಮ ಧೈರ್ಯವೆಲ್ಲಾ ಕತ್ತಲಾಗುತ್ತಲೇ ಕರಗಿ ಹೋಗುತ್ತಿತ್ತು. ಹಾಗಾಗಿ ನಮಗೆ ಚಿನ್ನದ ನಾಣ್ಯ ಕೇವಲ ಕನಸಾಗಿ ಉಳಿಯಿತು!

ನಮ್ಮ ತಂದೆಯವರು  ಯಾವಾಗಲೂ ಜಿಪುಣತನವನ್ನು ದ್ವೇಷಿಸುತ್ತಿದ್ದರು. ಆದರೆ ಅವರು ತಮ್ಮ ಸಂಪಾದನೆಯಿಂದ ಯಾವುದೇ ಖರ್ಚು ಮಾಡುತ್ತಲೂ ಇರಲಿಲ್ಲಇದು ನಿಮಗೆ ಒಗಟಾಗಿ ಕಾಣಬಹುದು. ಕಾರಣವಿಷ್ಟೇ. ನಮ್ಮ ತಂದೆಯವರ ಹಣದ ವ್ಯವಹಾರ ಹೀಗಿತ್ತು:
ಸಾಲಮಾಡುಖರ್ಚುಮಾಡುದುಡಿಮೆಮಾಡುಸಾಲ ತೀರಿಸು
ಒಟ್ಟಿನಲ್ಲಿ ವಿಷಯವೇನೆಂದರೆ ತಂದೆಯವರ ದುಡಿಮೆಗಿಂತ ಸಾಲವೇ ಜಾಸ್ತಿಯಿದ್ದರಿಂದ ಅದೆಲ್ಲ ಸಾಲತೀರಿಸಲು ಹೋಗಿಬಿಡುತ್ತಿತ್ತು. ಹಾಗಾಗಿ ದುಡಿಮೆಯಿಂದ  ಖರ್ಚು ಮಾಡುವ ಪ್ರಶ್ನೆಯೇ  ಇರಲಿಲ್ಲ. ಹಾಗೂ ಜಿಪುಣತನದ ಸಮಸ್ಯೆಯೂ ಇರಲಿಲ್ಲ.
ನನ್ನ ವಿದ್ಯಾಭ್ಯಾಸ
ನಮ್ಮ ತಂದೆತಾಯಿಯವರಿಗೆ ನಾವು ಒಟ್ಟು ಒಂಬತ್ತು ಮಕ್ಕಳು (ಆರು ಗಂಡು ಹಾಗೂ ಮೂರು ಹೆಣ್ಣು). ಹೆಸರುಗಳು ಕ್ರಮವಾಗಿ ರಾಮಕೃಷ್ಣ , ಗೌರಿ, ರುಕ್ಮಿಣಿ, ಲಕ್ಷ್ಮೀ ನಾರಾಯಣ (ಪುಟ್ಟಣ್ಣ ), ಕೃಷ್ಣಮೂರ್ತಿ, ಲೀಲಾವತಿ, ಮಾಧವ, ಶ್ರೀನಿವಾಸ ಮತ್ತು ಶ್ರೀಧರ ಎಂದಿತ್ತು.

ನಮ್ಮ ಸಮಾಜದ ಕಟ್ಟಳೆಯಂತೆ ಮಕ್ಕಳ ವಿದ್ಯಾಭ್ಯಾಸ ನವರಾತ್ರಿಯ ವಿಜಯದಶಮಿಯ ದಿನವೇ ಆರಂಭವಾಗಬೇಕಿತ್ತು. ಅದರಂತೆ ನನ್ನ ತಂದೆಯವರು ನನ್ನನ್ನು  ಅವರ  ತೊಡೆಯಮೇಲೆ ಕೂರಿಸಿಕೊಂಡು ಒಂದು ಹರಿವಾಣದಲ್ಲಿ ಇಟ್ಟಿದ್ದ ಅಕ್ಕಿಯಮೇಲೆ ಅರಿಶಿನದ ಬೇರಿನಿಂದ "ಶ್ರೀ ಗಣೇಶಾಯ ನಮಃ " ಎಂದು ಬರೆಸಿದರು. ಆಮೇಲೆ ನನ್ನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನನ್ನ ದೊಡ್ಡಣ್ಣನಿಗೆ ವಹಿಸಲಾಯಿತು. ದೊಡ್ಡಣ್ಣನ ವಿದ್ಯಾಭ್ಯಾಸ ದುರದೃಷ್ಟವಶಾತ್ ೮ನೇ ತರಗತಿಗೇ ಮುಕ್ತಾಯವಾಗಿತ್ತು. ಮುಂದೆ ಓದಬೇಕೆಂಬ ಅವನ ಆಶೆಗೆ ತಂದೆಯವರಿಂದ ಪ್ರೋತ್ಸಾಹ ಸಿಗದೇ ಹೋಯಿತು. ನಿರಾಸೆಯ ನಡುವೆಯೂ ಅವನು ನಮ್ಮಿಬ್ಬರನ್ನೂ (ಪುಟ್ಟಣ್ಣ ಮತ್ತು ನಾನು) ಓದಿಸಿಯೇ ಬಿಡಬೇಕೆಂದು ಪಣ ತೊಟ್ಟಿರಬೇಕು. ಏಕೆಂದರೆ ಅವನೇ ನಮ್ಮಿಬ್ಬರಿಗೂ ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಬರವಣಿಗೆ ಹಾಗೂ ಓದಲು ಕಲಿಸಿದ್ದನ್ನು ನಾವೆಂದಿಗೂ ಮರೆಯುವಂತಿಲ್ಲ. ನಮ್ಮೂರಿನಲ್ಲಿ  ಯಾರೂ ಅರಿಯದ ಹಿಂದಿ ಭಾಷೆಯನ್ನು ಸ್ವಪ್ರಯತ್ನದಿಂದ ಕಲಿತು ನಮಗೂ ಬೋಧಿಸಿ ನಮಗೆ ತ್ರಿಭಾಷಾ ಸೂತ್ರದ ತಳಹದಿ ಹಾಕಿದವ ನಮ್ಮ ಪ್ರೀತಿಯ ದೊಡ್ಡಣ್ಣ.

ನಮ್ಮಣ್ಣನ ಸಾಹಿತ್ಯ ಪ್ರಪಂಚ ತುಂಬಾ ದೊಡ್ಡದಾಗಿತ್ತು. ಅವನು ತನ್ನದೇ ಆದ  ಪುಸ್ತಕ ಭಂಡಾರವನ್ನು ಹೊಂದಿದ್ದಲ್ಲದೆ ಬೇರೆಬೇರೆ ಕಡೆಗಳಿಂದ ಪುಸ್ತಕಗಳನ್ನು ಓದಲು  ತರುತ್ತಿದ್ದ. ಸ್ವಾಭಾವಿಕವಾಗಿ ನಮಗೂ ಪುಸ್ತಕಗಳನ್ನೋದುವ ಅಭ್ಯಾಸ ಚಿಕ್ಕ ವಯಸ್ಸಿನಲ್ಲೇ ಪ್ರಾರಂಭವಾಯಿತು. ಮಕ್ಕಳ ಪತ್ರಿಕೆಗಳಾದ ಚಂದಮಾಮ ಮತ್ತು ಬಾಲಮಿತ್ರಗಳಲ್ಲದೆ ನಾವು ಎನ್ ನರಸಿಂಹಯ್ಯನವರ ಪತ್ತೇದಾರಿ ಕಾದಂಬರಿಗಳು ಹಾಗೂ ಅನಕೃ ಮತ್ತು ತರಾಸು ಅವರ ಸಾಮಾಜಿಕ ಕಾದಂಬರಿಗಳನ್ನೆಲ್ಲಾ ಬಾಲ್ಯದಲ್ಲೇ ಓದಿ ಬಿಟ್ಟಿದ್ದೆವು. ಇಷ್ಟಲ್ಲದೆ ನಾವು ಅಣ್ಣನನ್ನೇ ಅನುಸರಿಸುತ್ತಾ ಕನ್ನಡ ಕವನಗಳು, ಹಾಡುಗಳು, ಪದ್ಯಗಳು, ಭಜನೆಗಳು ಹಾಗೂ ಸಿನಿಮಾ ಹಾಡುಗಳನ್ನೂ ಕಲಿತು ಬಿಟ್ಟೆವು.

ಇನ್ನೊಂದು ವಿಶೇಷವೆಂದರೆ ನಮ್ಮಣ್ಣ ಅವನ ಸ್ನೇಹಿತರಾದ ಪುರದಮನೆ ಕೃಷ್ಣರಾವ್ ಅವರಿಂದ ಹೆಚ್ ಎಂ ವಿ ಗ್ರಾಮೋಫೋನ್ ನಮ್ಮ ಮನೆಗೆ ಆಗಾಗ ತರುತ್ತಿದ್ದ. ಅವರ ಸಂಗ್ರಹದಲ್ಲಿ ವೀರ ಅಭಿಮನ್ಯು, ನಾಗಾನಂದ , ಗಯಚರಿತ್ರೆ , ವಿಶ್ವಾಮಿತ್ರ-ಮೇನಕಾ  ಮುಂತಾದ ಪ್ರಸಂಗಗಳಲ್ಲದೇ ಕನ್ನಡ ಮತ್ತು ಹಿಂದಿ ಸಿನಿಮಾ ಹಾಡುಗಳು ಇರುತ್ತಿದ್ದವು. ಬಾಯಿಪಾಠ ಮಾಡುವುದರಲ್ಲಿ ನಿಸ್ಸೀಮರಾಗಿದ್ದ ನಾನು ಮತ್ತು ಪುಟ್ಟಣ್ಣ ಕನ್ನಡ ಸಿನಿಮಾ ಹಾಡುಗಳಲ್ಲದೇ ಕೆ ಎಲ್ ಸೈಗಲ್ ಮತ್ತು ಮನ್ನಾಡೆ ಅವರ ಹಿಂದಿ ಸಿನಿಮಾ ಹಾಡುಗಳನ್ನೂ ಹಾಡತೊಡಗಿದೆವು! ನಾವಿಬ್ಬರೂ ನಮ್ಮದೇ ಆದ ವಿಸ್ಮಯ ಪ್ರಪಂಚದಲ್ಲಿದ್ದೆವೆಂದು ಈಗ ಅರಿವಾಗುತ್ತಿದೆ.

ನಮ್ಮ ಬಾಲ್ಯ ಪ್ರಪಂಚದಲ್ಲಿ ನಮಗೆ ನಾವು ಓದಿದ್ದೆಲ್ಲಾ ಪರಮ ಸತ್ಯವೆಂಬ ಭಾವನೆ ಇರುತ್ತಿತ್ತು. ಹಾಗೂ ಎಷ್ಟೋ ವಿಷಯಗಳನ್ನು ನಮ್ಮದೇ ಆದ  ರೀತಿಯಲ್ಲಿ ವಿಪರೀತ ಅರ್ಥ ಮಾಡಿಕೊಂಡು ಪ್ರಯೋಗ ಮಾಡಲು ತೊಡಗುತ್ತಿದ್ದೆವು.

ನಮ್ಮ ಚರಿತ್ರೆ ಪುಸ್ತಕದಲ್ಲಿ ಆರ್ಯರು ಮಧ್ಯ ಏಷ್ಯಾದ ಅತ್ಯಂತ ಛಳಿ  ಪ್ರದೇಶದಿಂದ ಬಂದವರಾದ್ದರಿಂದ ತುಂಬಾ ಗಟ್ಟಿಮುಟ್ಟಾದ ಶರೀರವನ್ನು ಹೊಂದಿದ್ದರು ಎಂದು ಬರೆದಿತ್ತು. ಅದನ್ನು ಓದಿದ ಪುಟ್ಟಣ್ಣ ತಾನೂ ಸಹಾ ತನ್ನ ದೇಹವನ್ನು ಛಳಿಯಲ್ಲಿರುವಂತೆ ನೋಡಿಕೊಂಡರೆ ಆರ್ಯರಂತೆ ಧೃಢಕಾಯನಾಗಿ ಬಿಡಬಹುದೆಂದು ಭಾವಿಸಿ ಬಿಟ್ಟಅದರಂತೆ ಅವನು ರಾತ್ರಿ ಮಲಗುವಾಗ ಅಂಗಿಯನ್ನು ತೆಗೆದುಬಿಟ್ಟು ಹೊದಿಕೆ ಹಾಕಿಕೊಳ್ಳದೇ ನಿದ್ದೆ ಮಾಡತೊಡಗಿದ. ಆಗ ನನಗೆ ನಿಜವಾಗಿ ಭಯವಾಗತೊಡಗಿತು. ಕಾರಣವಿಷ್ಟೇ. ನಮ್ಮ ದೈನಂದಿನ ಜಗಳಗಳಲ್ಲಿ ಅವನ ಕೈ ಯಾವಾಗಲೋ ಮೇಲಿರುತ್ತಿತ್ತು. ಅವನು ನನಗಿಂತ ಎರಡು ವರ್ಷ ದೊಡ್ಡವನು ಮಾತ್ರವಲ್ಲ. ಹೆಚ್ಚು ದೇಹಶಕ್ತಿಯನ್ನೂ ಹೊಂದಿದ್ದ. ಇನ್ನು ಅವನು ಆರ್ಯರಷ್ಟು ಧೃಢಕಾಯನಾಗಿ ಬಿಟ್ಟರೆ ನನ್ನ ಕಥೆ ಮುಗಿದಂತೆಯೇ ಎಂದು ಭಾವಿಸಿದೆ. ನನ್ನ ಅದೃಷ್ಟಕ್ಕೆ ಅದು ಛಳಿಗಾಲವಾಗಿತ್ತು. ಹಾಗಾಗಿ ಮೂರು ದಿನಕ್ಕೇ ಪುಟ್ಟಣ್ಣನಿಗೆ ಶೀತ ಪ್ರಾರಂಭವಾಯಿತು. ಅಮ್ಮನಿಗೆ ತುಂಬಾ ಕೋಪ ಬಂದು ರಾತ್ರಿಯಲ್ಲಿ ಅವನ ಮೇಲೆ ಹೊದಿಕೆ ಹಾಕತೊಡಗಿದಳು. ಅಲ್ಲಿಗೆ ಆರ್ಯನಾಗುವ ಅವನ ಕನಸು ಕೊನೆಗೊಂಡಿತು.
----ಮುಂದುವರಿಯುವುದು ----

Friday, October 28, 2016

The Story of a Malnad Boy - 58

All the classes started for us in the right earnest at the college. Our Principal was indeed a great administrator. His stature was such that the batch of young and fresh postgraduate lecturers was looking more like his students than our teachers! Anyways he kept them under tight leash and enforced strict discipline among the students and the lecturers as well. I had earlier seen experienced senior lecturers at Sahyadri College in Shimoga. I had even attended one of their classes. It was in a way a bit of disappointment for me to hear the lectures of raw postgraduates who had just passed out of the University. But on the positive side, I found them very enthusiastic and quite serious in their assignment.

The first lecturer who impressed me most was the chemistry lecturer Raghunathan. As the post of physics lecturer could not be filled up initially, he took the same also for us. Within a short time he recognized me as a brilliant student and marked me for special attention. It was the same case with Mathematics lecturer N R Bhat. He identified me and Prakash Kamath as two students capable of scoring cent per cent marks. I had my own reservations about the same. But he was sure and he monitored our progress closely to ensure that we were successful.

After about two months, we got a new lecturer for physics. His name was Krishnappaiah. He was already in the services of the Academy at Manipal Engineering College. When we heard his name, we were not at all impressed. In fact the name reminded us the proprietor of a famous hotel in Thirthahalli. But we were totally wrong in our assessment of him. In fact he turned out to be the best lecturer and mentor for me! He later retired as the Principal of the college. I have the highest regards for his capacity and integrity as one of my greatest teachers.

Krishnappaiah came to the college with a weightage of one year seniority at the Academy College. Hence the question of who would be the Vice Principal was also settled. He was a no-nonsense man, a very good lecturer and a professional in the matter of administration. He remained an eligible bachelor till he opted for voluntary retirement as Principal of the College.

As far as the students of our first batch were concerned certain students remain fresh in my memory. The first of them was Ummarabba from a place called Kammardi. He was a very jovial fellow and a very good speaker in Kannada. He was also good in singing Kannada film songs. Later as a B.Sc student he developed certain eccentricities and fell out of favour with the college management. It was quite unfortunate. However, many years later when I was working outside Karnataka, I came to know that he had entered politics. In fact he was elected as MLA from a constituency in South Kanara district. He was reported to be a very popular politician. But his drinking habits got better of him and he died a premature death as a young and upcoming politician.

Another student who was very good in delivering speeches in Kannada was Rama Sharma. He was also highly talented and was appreciated for his antics. But soon his antics and eccentricities got better of him! It reached a stage where he was unofficially declared as a man with unsound mind. He had to discontinue his studies.

The student Padmanabha was very stylish and was good in delivering speeches in both Kannada and English. He used to dress well and wanted to impress the girl students always. His talents helped him become the first President of the college students union.

On the Saturdays our classes used to end early in the afternoon. I had made it a point to visit my home on every weekend. There I used to help my father in the various activities at home. Most part of my Sundays I used to spend in our arecanut garden. There was lot of curiosity among the villagers about the new college at Sringeri. I had to spend some time in answering their queries. On the Monday mornings I would start early and reach Sringeri walking all the way for eight miles. I continued this for all the four years I studied in the Sringeri College. I should place it on record that I used to enjoy each of these journeys and never felt it a burden to walk this long distance. My parents and family used to wait for me anxiously on the Saturday evenings. I never disappointed them in all those years.

A letter from my elder brother (AVL) created lot of tension to my parents. He had written that his cousin on whose support he had left for Bangalore for college studies had let him down badly. The cousin who was well-off had clearly assured him that he would offer him full financial support for his college education. In fact my parents had thought that as far as he was concerned they had nothing to worry financially. My father was already finding it tough to meet my mess charges of thirty rupees per month. As per my brother, the cousin had sent him one hundred rupees. Thereafter he had just ignored all his communications for further assistance for his maintenance.

I was staying in the front room of this cousin’s house in Sringeri. He was staying in his village home near Sringeri. However, he used to visit the Sringeri-house everyday. Off late I was hearing that he had fallen into bad company. As his father had suddenly died, he got control of a vast landed property at a young age. He was the only rich man from our paternal side. We were in fact very proud of his financial position. He was the only son and had started mismanaging the property. He had raised huge loans for no apparent reasons. He remained a bachelor and never settled down in life. The things reached such a stage that one fine morning he simply disappeared. His whereabouts are not known till this day. The entire property was taken over by creditors. His unmarried sister lives under a thatched roof today in a pitiable condition.

 Even though I did raise the issue with my cousin regarding my brother’s maintenance at that time, he was not forthcoming in his responses. He had delivered a bitter lesson to my brother. That was, not to depend on the relatives for their support in spite of their own assurances! Ultimately the burden of my brother’s education also fell on my parents. My brother had to struggle hard in Bangalore for his survival. He had to resort to vaaraanna (a system wherein the students will be fed free by certain families on different days of the week).

In the first terminal examination I secured highest marks in all my subjects. I could also secure cent percent marks in Mathematics. Suddenly a feeling started developing among my lecturers that I was capable of securing a rank at the University level. They started putting pressure on me to work in that direction. Unlike in my SSLC examination, the teachers here were very much supportive and were capable of giving directions to me to achieve this goal. I started developing lot of confidence and it came out in my performances. The Principal also spoke to me individually and hinted that the college was expecting me to keep its flags high. In one of the college functions my benefactor Shankar Rao had participated. He was thanked by the Principal and my lecturers for having helped my admission to the college. He felt very proud and thanked me for bringing him such honour!

One fine morning we got the news that our English lecturer SriRam had left the college. It was a great shock to us. What hurt us more was that he had left without speaking to his students. He had joined a college in Mysore. That was a sort of demoralization for us at that stage. His vacancy was filled up only after a gap of two months. The new lecturer Subraya was an elderly gentleman and was well experienced. He made us prepare well for our final examination.

The next lecturer to leave us was Raghunathan, our chemistry lecturer. As already mentioned by me, he was a very good lecturer and was totally involved in our affairs. Unlike SriRam he spoke to all of us before leaving and was in tears. The reasons for his sudden departure never came to light. He joined the Medical College at Davanagere as a faculty member. The third and the last leave that year was Shivananda, the economics lecturer. He was equally popular with arts students. He joined the commercial tax department of State Government. These three departures dealt a big blow to all the students and our morale came down steeply. It took some time for us to recover from the shock. Being small town boys we were very sentimental in those days! We were also quite aware that there was very little incentive to the lecturers to work in Sringeri in view of the non-availability of usual facilities in those days. While people in general were very much interested in visiting Sringeri as travelers, they were reluctant to stay there.

TMA Pai used to visit our college often. It was very interesting to hear him every time. He would explain to us as to how he built up Manipal brick by brick. As an entrepreneur he had established several educational institutions, Syndicate Bank, Manipal Hospital, etc. The then Chairman of Syndicate Bank T A Pai was another regular visitor. Several other important personalities and Kannada littérateurs also visited the college. We were very lucky to hear all of them.

As our final examination was approaching, all of us started preparing ourselves. Suddenly there was an announcement of a preparatory examination. I was very much against this examination. I just wanted to write the final examination directly. I took a firm decision and just stayed back at my house absenting myself from the examination. As my father had some work at Sringeri I sent a message that I was not keeping well.

He met some of my lecturers at the mess and informed them accordingly. They all expressed great concern for me and told him that they were sorry that I could not attend the examination. Seeing their great concern, my father felt that I must have committed a blunder. He was very much concerned and rushed back to tell me. But I remained adamant and took it lightly. Ultimately that did not make much difference for me at all.

Our examinations started in the month of March. I could write all my papers to my full satisfaction. There was one particular question in physics which was out of syllabus. In fact this particular question had appeared two times in earlier years also. I had observed it and had repeatedly requested Krishnappaiah to cover it in our classes. He had assured me initially that he would do it. But at the last minute he told me that there was very little possibility of it getting repeated third time. He failed to cover it as assured.

When I finished writing the physics paper and walked out of the examination hall, I saw Krishnappaiah anxiously waiting for me outside. He was profusely sorry for failing to cover the topic in spite of my special request. He thought I had lost nearly ten marks as there was no choice for this question. But I told him not to worry as I had answered the question without any difficulty!

It was my nature not to take any risks in such matters. I had referred to a guide and had prepared myself well for answering this question also. As a result I was the only student at least in our college who had answered this out of syllabus question correctly! Krishnappaiah could not simply believe me! He congratulated me for my persistence and success in the matter.

------- (To be continued)

Monday, October 24, 2016

ನನ್ನ ಬಾಲ್ಯ

ಅಧ್ಯಾಯ

ನನ್ನ ಬಾಲ್ಯಕಾಲದ ಕಥೆಯನ್ನು ಬರೆಯಬೇಕೆಂದು ಅದೆಷ್ಟೋ ವರ್ಷಗಳಿಂದ ಎಣಿಸುತ್ತಿದ್ದೆ. ಆದರೆ ಅದಕ್ಕೆ ಈವರೆಗೂ ಕಾಲಕೂಡಿ ಬರಲಿಲ್ಲ. ಈಗ ಬರೆಯಲೇಬೇಕೆಂದು ತೀರ್ಮಾನಿಸಿ ಬರೆಯುತ್ತಿದ್ದೇನೆ. ನನ್ನ ಮೇಲೆ ಶೃಂಗೇರಿ ಶಾರದಾಂಬೆಯ ಕೃಪೆಯಿರಲಿ.

ನನಗೆ ಇಲ್ಲಿ ಒಂದು ಸಮಸ್ಯೆ ಎದುರಾಗಿದೆ. ನಾನೊಬ್ಬ ಕವಿಯಲ್ಲ ಮತ್ತು ಕಾದಂಬರಿಕಾರನೂ ಅಲ್ಲ. ಹಾಗಿದ್ದರೆ ನನಗೆ ಪ್ರತಿಯೊಂದು ಘಟನೆಯನ್ನೂ ವರ್ಣನೆಮಾಡಿ ಹೇಳುವ ಸಾಮರ್ಥ್ಯ ಇರುತ್ತಿತ್ತು. ನನಗೆ ಅದಿಲ್ಲ. ಆದರೆ ನಾನೊಂದು ಕೆಲಸ ಮಾಡಬಲ್ಲೆ. ಅದೆಂದರೆ ಇದ್ದದ್ದನ್ನು ಇದ್ದಂತೆ ಹೇಳುವುದು. ದೇವರು ನನಗೆ ಬರೆಯುವ ಶಕ್ತಿಯನ್ನು ಕರುಣಿಸಿದ್ದಾನೆ. ನನ್ನ ಮೆಚ್ಚಿನ ಪ್ರಸಿದ್ಧ ಬಂಗಾಳಿ ಕಾದಂಬರಿ ಸಾರ್ವಭೌಮ ಶರಶ್ಚಂದ್ರರು ಹೇಳುವಂತೆ "ಎರಡು ಕಾಲಿದ್ದವರೆಲ್ಲಾ ನಡೆಯಬಲ್ಲರು. ಆದರೆ ಎರಡು ಕೈಇದ್ದವರೆಲ್ಲಾ ಬರೆಯಲಾರರು”.  ಹೌದು. ನನಗೆ ಶಕ್ತಿಯಿದೆ. ಆದ್ದರಿಂದ ಬರವಣಿಗೆ ಮುಂದುವರಿಸುತ್ತೇನೆ.

ಇಲ್ಲಿ ನಾನೊಂದು ವಿಷಯ ಹೇಳಲೇ ಬೇಕು. ಅದು ನನ್ನ ಹೆಸರಿಗೆ ಸಂಬಂಧಪಟ್ಟಿದ್ದು. ನನ್ನಮ್ಮಅವಳ ತಂದೆತಾಯಿಗೆ ಒಬ್ಬಳೇ ಮಗಳು. ಹಾಗಾಗಿ ನಮಗೆ ಸೋದರಮಾವನೆಂದರೆ ಅವಳ ಚಿಕ್ಕಪ್ಪನ ಮಗ ಕೃಷ್ಣಮೂರ್ತಿ ಎಂಬುವರು ಮಾತ್ರಾ. ನಮ್ಮಮ್ಮನಿಗೆ ಅವರಮೇಲೆ ತುಂಬಾ ಪ್ರೀತಿ. ಅತ್ಯಂತ ಸ್ಪುರದ್ರೂಪಿಯಾಗಿದ್ದ ಅವರಿಗೆ ಆಗ ಮದುವೆಯಾಗಿ ಕೆಲವೇ ದಿನಗಳಾಗಿದ್ದವು. ನಾನು ಹುಟ್ಟಿದದಿನವೇ ನಮ್ಮಮನೆಗೆ ಬಂದು ಮಗುವಿಗೆ ತಮ್ಮ ಹೆಸರನ್ನೇ ಇಡಬೇಕೆಂದು ಅಮ್ಮನ ಹತ್ತಿರ ಹೇಳಿದರಂತೆ. ವಿಚಿತ್ರವೆಂದರೆ ನನ್ನ ನಾಮಕರಣವಾದ ಕೆಲವೇ ದಿನಗಳಲ್ಲಿ ಅವರು ತಮ್ಮ ಚಿಕ್ಕ ವಯಸ್ಸಿನ ಪತ್ನಿಯನ್ನು ತೊರೆದು ಅಕಾಲ ಮರಣ ಹೊಂದಿದರಂತೆ. ಅವರಿಗೆ ಆಗಲೇ ತಮ್ಮ ಮರಣದ ಮುನ್ಸೂಚನೆ ಸಿಕ್ಕಿತ್ತೇಅದಕ್ಕಾಗಿಯೇ ತಮ್ಮ ಹೆಸರನ್ನು ನನಗೆ ಇಟ್ಟು ಹೋದರೇ? ಇದು ಈಗ ಒಂದು ಯಕ್ಷಪ್ರಶ್ನೆಯಷ್ಟೇ.

ಕಾಲದಲ್ಲಿ ಯಾವುದೇ ಹೆರಿಗೆ ಆಸ್ಪತ್ರೆಗಳಿರಲಿಲ್ಲ. ನಮ್ಮೂರಿಗೆ ಸ್ವಲ್ಪ ದೂರದಲ್ಲಿದ್ದ ಕುಳುಗಾರು ಎಂಬಲ್ಲಿ ಪುಟ್ಟು ಎಂಬ ಸೂಲಗಿತ್ತಿ ಇದ್ದಳು. ಗರ್ಭಿಣಿಗೆ ಒಂಬತ್ತು ತಿಂಗಳು ಹತ್ತಿರ ಬಂದಾಗ ಅವಳು ಮನೆಗೆ ಬಂದು ಗರ್ಭಿಣಿಯನ್ನು ಪರೀಕ್ಷಿಸಿ ಮಗು ಹುಟ್ಟುವ ದಿನದ ಅಂದಾಜುಮಾಡಿ ಹೇಳಿ ಹೋಗುತ್ತಿದ್ದಳುಗರ್ಭಿಣಿಗೆ ಪ್ರಸವ ವೇದನೆ ಶುರುವಾದೊಡನೆ ಅವಳಿಗೆ ವರ್ತಮಾನ  ತಲುಪಿ ಹಗಲಿರಲಿ  ರಾತ್ರಿಯಿರಲಿ ಹಾಜರಾಗುತ್ತಿದ್ದಳು. ಪುಟ್ಟುವಿನ ನೇತೃತ್ವದಲ್ಲಿ ನಡೆದ ಹೆರಿಗೆಗಳಲ್ಲಿ ಯಾವುದೇ ಮಗುವಿನ ಅಥವಾ ತಾಯಿಯ ಜೀವಕ್ಕೆ ಅಪಾಯವಾದ ಉದಾಹರಣೆಗಳಿರಲಿಲ್ಲ. ಅಷ್ಟೊಂದು ನಿಪುಣ ಸೂಲಗಿತ್ತಿಯವಳು. ತನ್ನ ಕೊನೆಗಾಲದವರೆಗೂ ವೃತ್ತಿಯನ್ನು ಮುಂದುವರಿಸಿದ ಅವಳು ಅದಕ್ಕೆ ಹಣವನ್ನು ತೆಗೆದುಕೊಳ್ಳುವ ಕ್ರಮವನ್ನೇ ಇಟ್ಟಿರಲಿಲ್ಲ. ಆದರೆ ಅವಳು ಮೂರುತಿಂಗಳಿನ ಮಗುವನ್ನು ನೋಡಲು ಬಂದಾಗ ಮನೆಯವರು ಅವಳ ಮಡಿಲಿಗೆ ಒತ್ತಾಯದಿಂದ ಅಡಿಕೆ, ಅಕ್ಕಿ ಮತ್ತು ಬಟ್ಟೆ ತುಂಬುತ್ತಿದ್ದರು. ನನ್ನ ಜನನವೂ ಇದೇ  ಪುಟ್ಟುವಿನ ಕೈಯಲ್ಲೇ  ಆಯಿತು.

ನಮ್ಮ ಮನೆಯ ಮಾಮೂಲಿ ಕ್ರಮದಂತೆ ನನ್ನ  ತಂದೆಯವರು ನನ್ನ ಹುಟ್ಟಿನ ನೆನಪಿಗೆ ಒಂದು ಅಡಿಕೆ ಸಸಿಯನ್ನು ನಮ್ಮ ತೋಟದ ಕೆರೆಯದಂಡೆಯಲ್ಲಿ ನೆಟ್ಟಿದ್ದರು. ಅದು ಕೆಲವು ಅಡಚಣೆಗಳನಡುವೆ ಚೆನ್ನಾಗಿಯೇ ಬೆಳೆದು ಫಲನೀಡಲಾರಂಭಿಸಿತು. ನಾನು ಊರಿಗೆ ಹೋದಾಗಲೆಲ್ಲಾ ಅದರ ಬೆಳವಣಿಗೆಯನ್ನು ಗಮನಿಸುತ್ತಿದ್ದೆ. ಈಚೆಗೆ ಅದರ ಪರಿಸ್ಥಿಥಿ ತಿಳಿದಿಲ್ಲ.

ನನ್ನ ಬಾಲ್ಯಕಾಲದ ನೆನಪುಗಳು ನನ್ನ ಯಾವ ವಯಸ್ಸಿನಿಂದ ಶುರುವಾಗುತ್ತವೆಂದು ಈಗ ನಾನು ಹೇಳಲಾರೆ. ಆದರೆ ನಾನು ನನಗೆ ತಿಳಿದಂತೆ ಯಾವಾಗಲೂ ನನ್ನ ತಂದೆಯವರಿಗೆ ಅಂಟಿಕೊಂಡಿರುತ್ತಿದ್ದೆ. ಅವರ ಹಾಸಿಗೆಯಲ್ಲೇ ಮಲಗಿ ಅವರಿಂದ ಬಾಯಿಪಾಠ ಹೇಳಿಸಿಕೊಂಡ ನೆನಪು ಹಚ್ಚ ಹಸುರಾಗಿದೆ. ಪ್ರತಿಯೊಂದು ವಾರದ , ತಿಥಿಗಳ, ತಿಂಗಳುಗಳ,ರಾಶಿಗಳ,ಸಂವತ್ಸರಗಳ , ನಕ್ಷತ್ರಗಳ ಹಾಗೂ ಅಷ್ಟ ದಿಕ್ಪಾಲಕರ ಹೆಸರುಗಳನ್ನು ರಾತ್ರಿ ಮಲಗುವ ಮುನ್ನ ಹೇಳಲೇ ಬೇಕಿತ್ತು. ಇಷ್ಟಲ್ಲದೇ ನಿದ್ದೆಹೋಗುವ ಮೊದಲು "ರಾಮಸ್ಕಂದಂ ಹನುಮಂತಂ ವೈನತೇಯಂ ವೃಕೋದರಂ----- " ಹಾಗೂ "ಬೆನಕ ಬೆನಕ ಏಕದಂತ ಪಚ್ಚೆಕಲ್ಲು ಪಾಣೀಪೀಠ ಮುತ್ತಿನವುಂಡೆ ಹೊನ್ನೇಘಂಟೆ -----" ಎಂಬ ಎರಡು ಮಂತ್ರಗಳನ್ನು ಹೇಳಬೇಕಿತ್ತು. ಬೆಳಿಗ್ಗೆ ಯಾವಾಗಲೂ ಬಲ ಮಗ್ಗುಲಲ್ಲೇ ಏಳಬೇಕಿತ್ತು. ಸ್ನಾನದ ಕೊನೆಯಲ್ಲಿ "ಗೋವಿಂದ ಗೋವಿಂದ " ಎಂದು ಸ್ಮರಣೆ ಮಾಡಿ ಕೊನೆಯ ಚೆಂಬಿನ ನೀರನ್ನು ಮೈಮೇಲೆ ಎರೆದುಕೊಳ್ಳಬೇಕಿತ್ತು. ಊಟದ ಮುನ್ನ "ಅನ್ನಪೂರ್ಣೇ ಸದಾಪೂರ್ಣೆ ಶಂಕರೇ ಪ್ರಾಣವಲ್ಲಭೆ " ಎಂಬ ಮಂತ್ರ ಹೇಳಲೇ ಬೇಕಿತ್ತುತಂದೆಯವರು ಇಲ್ಲದಿದ್ದರೆ ನಾನು ದೊಡ್ಡಣ್ಣನ ಹಾಸಿಗೆಯಲ್ಲಿ ಮಲಗಿ ಅವನಿಗೆ ಬಾಯಿಪಾಠ ಒಪ್ಪಿಸಬೇಕಿತ್ತು.

ನನಗೆ ನನ್ನ ತಂದೆಯವರ ಪರಾಕ್ರಮಗಳ ಮೇಲೆ ವಿಶೇಷ ಅಭಿಮಾನವಿತ್ತು. ಅವರ ಸಾಹಸಗಳಿಗೆ ಕೊನೆ ಮೊದಲೇ ಇರಲಿಲ್ಲ. ಯಾವ ಸಿನಿಮಾ ಹೀರೋಗೂ ಅವರನ್ನು ಮೀರಿಸುವ ಸಾಮರ್ಥ್ಯವಿರಲಿಲ್ಲ . ಅವರ ಶಬ್ದಕೋಶದಲ್ಲಿ "ಭಯ" ಎಂಬ ಪದವೇ ಇರಲಿಲ್ಲ. ಯಾವುದೇ ಮರವನ್ನು ಲೀಲಾಜಾಲವಾಗಿ ಏರಬಲ್ಲವರಾಗಿದ್ದರು. ದಟ್ಟ ಮಳೆಗಾಲದಲ್ಲಿ ಅಡಿಕೆ ಮರಗಳನ್ನೇರಿ ಮರದಿಂದ ಮರಕ್ಕೆ ದಾಟುತ್ತಾ ಔಷಧಿಯನ್ನು ಸಿಂಪಡಿಸುತ್ತಿದ್ದರು. ಅವರಿಗೆ ಸರ್ಪಗಳೆಂದರೆ ಯಾವುದೇ ಭಯವಿರಲಿಲ್ಲ. ಕಾಲದಲ್ಲಿ ನಮ್ಮ ಮಲೆನಾಡಿನ ಮನೆಗಳಲ್ಲಿ ಸರ್ಪಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದವು. ನಾವು ಅವುಗಳನ್ನು ನೋಡಿ ಜೀವಭಯದಿಂದ ನಡುಗುತ್ತಿದ್ದೆವು. ಆದರೆ ನಮ್ಮ ತಂದೆಯವರು ಅವುಗಳನ್ನು ಕೊಲ್ಲುವುದರಲ್ಲಿ ನಿಸ್ಸೀಮರಾಗಿದ್ದರು. ಆದರೆ ನಾಗ ಸರ್ಪಗಳನ್ನು ಮಾತ್ರಾ ಕೊಲ್ಲುತ್ತಿರಲಿಲ್ಲಅವುಗಳ ಹೆಡೆಯನ್ನು ಗಮನಿಸಿದಾಗ ಅದರಲ್ಲಿ ವಿಷ್ಣುಪಾದವಿದ್ದರೆ ನಾಗಸರ್ಪವೆಂದು ತೀರ್ಮಾನಿಸಿ ಅದಕ್ಕೆ ಸಾಷ್ಟಾಂಗ ನಮಸ್ಕಾರಮಾಡಿ ಯಾವುದೇ ಹಾನಿ ಮಾಡದೆ ತನ್ನ ಹಾದಿ ಹಿಡಿದುಕೊಂಡು ಹೋಗುವಂತೆ ಬೇಡುತ್ತಿದ್ದರು. ಆಗ ಅದು ಸರಸರನೆ ಹರಿದು ಕಣ್ಮರೆಯಾಗುತ್ತಿತ್ತು.

ನಮಗೆಲ್ಲರಿಗೂ ದಿನಗಳಲ್ಲಿ ದೆವ್ವಗಳೆಂದರೆ ತುಂಬಾ ಭಯ. ಅದರಲ್ಲೂ "ಕೊಳ್ಳಿ ದೆವ್ವ " ಎಂದರೆ ವಿಶೇಷ ಭಯ. ಹೆಣ್ಣು ಕೊಳ್ಳಿದೆವ್ವ ನಮ್ಮ ಇಡೀ ಗ್ರಾಮದ ಸುತ್ತ ಕೈಯಲ್ಲಿ ಉರಿಯುವ  ಕೊಳ್ಳಿ ಹಿಡಿದುಕೊಂಡು ರಾತ್ರಿ ಕಾಲದಲ್ಲಿ ಸುತ್ತು ಹಾಕುತ್ತಿತ್ತಂತೆ. ಅದು ನಿಜವಾದ ದೆವ್ವ ಹೌದೋ ಅಲ್ಲವೋ ಎಂದು ತಿಳಿಯಲು ಒಂದೇ  ದಾರಿಯೆಂದರೆ ಅದರ  ಪಾದಗಳನ್ನು ಪರೀಕ್ಷಿಸುವುದು. ಅವು ಯಾವಾಗಲೂ ಹಿಂದಕ್ಕೆ ತಿರುಗಿರುತ್ತಿದ್ದವಂತೆ. ನಮ್ಮ ತಂದೆ ಒಂದು ಬಾರಿ ಅದಕ್ಕೆ ಸರಿಯಾಗಿ ಬುದ್ಧಿ ಕಲಿಸಿದ್ದರಂತೆ. ಅವರೊಮ್ಮೆ ಕೊಪ್ಪದ ಸಂತೆ ಮುಗಿಸಿ ಬರುವಾಗ ನಡು  ರಾತ್ರಿಯಾಗಿತ್ತಂತೆ. ಅದೊಂದು ಅಮಾವಾಸ್ಯೆಯ ಕಾಳರಾತ್ರಿ. ಆದರೆ ನಮ್ಮ ತಂದೆಗೆ ಕಡುಕತ್ತಲೆಯಲ್ಲೂ ಕಣ್ಣುಗಳು ಕಾಣಿಸುತ್ತಿದ್ದವು. ಹಾಗೂ ಅವರಿಗೆ ಯಾವುದೇ ಭಯಗಳಿರಲಿಲ್ಲ. ಆಗ ಇದ್ದಕ್ಕಿದ್ದಂತೆ ಅವರ ಮುಂದೆ ವಯಸ್ಸಾದ ಹೆಣ್ಣಿನಂತೆ ಪ್ರತ್ಯಕ್ಷವಾದ ಕೊಳ್ಳಿದೆವ್ವ ಅವರಿಂದ ಏನೋ ಸಹಾಯ ಕೇಳುವಂತೆ ನಾಟಕ ಮಾಡಿತಂತೆ. ಅವರು ಕೂಡಲೇ ಅದರ ಪಾದಗಳನ್ನು ಪರೀಕ್ಷಿಸಿದರಂತೆ. ಆಗ ಅದರ ಬಣ್ಣ ಬಯಲಾಯಿತಂತೆ. ಬೇರೆ ಯಾರಾಗಿದ್ದರೂ ಹೆದರಿ ನಡುಗುವ ಸನ್ನಿವೇಶ ಅದು. ಆದರೆ ನಮ್ಮ ತಂದೆ ಸ್ವಲ್ಪವೂ ಹೆದರದೇ ಅದರ ಕೈಯಲ್ಲಿದ್ದ ಕೊಳ್ಳಿಗಳನ್ನು ಕಿತ್ತು ಅದರ ಮುಖದಮೇಲೆ ಎರಚಿದರಂತೆ. ಕಕ್ಕಾಬಿಕ್ಕಿಯಾದ ದೆವ್ವ ತಿರುಗಿನೋಡದೆ ಪಲಾಯನ  ಮಾಡಿತಂತೆ. ಕಥೆಯನ್ನು ನಾವು ಬೇರೆಬೇರೆಯವರ ಬಾಯಿಂದ ಕೇಳಿದ್ದೆವು. ಹಾಗೂ ಪ್ರತಿಬಾರಿಯೂ ನಮ್ಮ ತಂದೆಯವರ ಬಗ್ಗೆ ಹೆಮ್ಮೆ ಪಟ್ಟಿದ್ದೆವು.

ನಮ್ಮ ಮನೆಯ ಹತ್ತಿರವೇ ಇದ್ದ ಇನ್ನೊಂದು ದೆವ್ವದ ಕಥೆ ಹೀಗಿತ್ತು. ಅದು ಪ್ರತಿ ರಾತ್ರಿ ಒಂದು ಹಲಸಿನಮರದ ಕೆಳಗೆ ಒಂದು ನಿರ್ಧಿಷ್ಟ ವೇಳೆಗೆ ಪ್ರತ್ಯಕ್ಷವಾಗುತ್ತಿತ್ತುಹಾಗೂ ಸುಮಾರು ಒಂದು ಘಂಟೆ ಅದು ಬೊಬ್ಬೆ ಹಾಕುತ್ತಿತ್ತು. ಅದರ ಕೂಗನ್ನು ಕೇಳಿ ಚಿಕ್ಕ ಮಕ್ಕಳಾದ ನಾವೆಲ್ಲ ಹಾಸಿಗೆಯಲ್ಲೇ ಹೆದರಿ ನಡುಗುತ್ತಿದ್ದೆವು. ನಮ್ಮ ತಂದೆ ಅದಕ್ಕೆ ಬುದ್ಧಿ ಕಲಿಸಲು ತೀರ್ಮಾನಿಸಿದರು. ಅದಕ್ಕೆ ಸರಿಯಾದ ತಿರುಮಂತ್ರ ಹಾಕಲು ಯೋಜನೆ ಮಾಡಿದರು. ರಾತ್ರಿ ಅವರು ದೆವ್ವ ಬರುವ ಮುಂಚೆಯೇ ಮರದ ಕೆಳಗೆ ಹಾಜರಾದರು. ಹಾಗೂ ದೆವ್ವವನ್ನು ಅಣಕಿಸುವಂತೆ  ಅದರ ಧ್ವನಿಯಲ್ಲೇ ಕೂಗುಹಾಕತೊಡಗಿದರು. ಇದು ಗೊತ್ತಿಲ್ಲದ ದೆವ್ವ ತನ್ನ ಮಾಮೂಲಿ ವೇಳೆಗೆ ಅಲ್ಲಿ ಹಾಜರಾಯಿತುಆದರೆ ತನ್ನ ಜಾಗದಲ್ಲಿ ಇನ್ನೊಂದು ದೆವ್ವವಿರುವುದನ್ನು ಕಂಡು ಅಚ್ಚರಿಗೊಂಡು ಕಾಲಿಗೆ ಬುದ್ಧಿ ಹೇಳಿತು. ಪುನಃ ಅದು ಅಲ್ಲಿಗೆ ಎಂದೂ ವಾಪಾಸ್ ಬರಲಿಲ್ಲ. ನಮ್ಮ ತಂದೆಯವರ ಸಾಹಸಕ್ಕೆ ಮಿತಿಯೇ ಇರಲಿಲ್ಲ.
 
ನಾನು ಚಿಕ್ಕವನಾಗಿದ್ದಾಗ ಒಮ್ಮೆ ದೆವ್ವ ನನ್ನ ಹತ್ತಿರವೇ ಓಡಾಡುತ್ತಿದ್ದುದು ನೆನಪಿಗೆ ಬರುತ್ತಿದೆ. ನಾನು ನನ್ನ ದೊಡ್ಡಣ್ಣನೊಡನೆ ಒಮ್ಮೆ ಕೆಳಕೊಡಿಗೆ ಎಂಬಲ್ಲಿದ್ದ ನನ್ನ ಅಮ್ಮನ ಸೋದರಮಾವನ ಮನೆಗೆ ಹೋಗಿದ್ದೆನಾವು ರಾತ್ರಿ ಅಲ್ಲಿಯೇ ತಂಗಬೇಕಾಯಿತು. ಅದೊಂದು ಕಗ್ಗತ್ತಲಿನ ಅಮಾವಾಸ್ಯೆಯ ರಾತ್ರಿಯಾಗಿತ್ತು. ನಾವು ಮಲಗುವ ಮುಂಚೆ ನಮಗೊಂದು ಎಚ್ಚರಿಕೆ ನೀಡಲಾಯಿತು. ಮನೆಗೆ ಸಮೀಪದಲ್ಲೇ ಇದ್ದ ಒಂದು ದಿಂಡಿನ ಮರದಲ್ಲಿ ಒಂದು ದೆವ್ವ ವಾಸವಾಗಿದ್ದು ರಾತ್ರಿ ಮನೆಯ ಸುತ್ತಾ ಗಸ್ತು ತಿರುಗುವ ಅಭ್ಯಾಸ ಇಟ್ಟುಕೊಂಡಿತ್ತಂತೆ. ಮನೆಗೆ ಯಾರಾದರೂ ಹೊಸಬರು ಬಂದರೆ ರಾತ್ರಿ ಅವರ ಹಾಸಿಗೆಯ ಹತ್ತಿರ ಬಂದು ಅವರ ಹೆಸರು ಹೇಳಿ ಕರೆಯುವುದಂತೆ. ನಾವು ಮಾತ್ರ ಅದರ ಕರೆಗೆ ಓಗೊಡಲೇ ಕೂಡದಂತೆಅಷ್ಟನ್ನು ಕೇಳುತ್ತಿದ್ದಂತೆ ಹಾಸಿಗೆಗೆ ಹೋಗುವ ಮುನ್ನವೇ ನನ್ನ ಮೈ ನಡುಗಲಾರಂಭಿಸಿತು. ನಮ್ಮ ಸಮಸ್ಯೆ ಎಂದರೆ ನಾವು ಜಗಲಿಯ ಮೇಲೆ ಮಲಗಬೇಕಾಗಿತ್ತು. ಹಾಗೂ ಅದಕ್ಕೆ ನಮ್ಮ ಅದೇಖಂಡಿ ಮನೆಯಂತೆ ಯಾವುದೇ ಬಾಗಿಲಿರಲಿಲ್ಲ.

ನಾನು ಅಣ್ಣನ ಪಕ್ಕದಲ್ಲೇ ಹಾಸಿಗೆಯಲ್ಲಿ ಮಲಗಿ ಮುಖದ ಮೇಲೆ ಗಟ್ಟಿಯಾಗಿ ಮುಸುಕೆಳೆದುಕೊಂಡೆ. ಮೊದಲೇ ಹೇಳಿದಂತೆ ಅರ್ಧ ರಾತ್ರಿಯಲ್ಲಿ ದೆವ್ವದ ಗಸ್ತು ಪ್ರಾರಂಭವಾಗಿದ್ದು ಅನುಭವಕ್ಕೆ ಬಂತು. ಅಷ್ಟು ಮಾತ್ರವಲ್ಲ. ಅದು ನನ್ನ ಹಾಸಿಗೆಯ ಹತ್ತಿರಬಂದು ನನ್ನ ಹೆಸರು ಹೇಳಿ ಕರೆಯಲಾರಂಭಿಸಿತು. ನಾನು ನನ್ನಣ್ಣನನ್ನು ಗಟ್ಟಿಯಾಗಿ ತಬ್ಬಿಕೊಂಡು ರಾಮನಾಮ ಜಪ ಮಾಡಲಾರಂಭಿಸಿದೆ.   ರಾಮನಾಮ ದೆವ್ವದ ಕಿವಿಗೆ ಬೀಳುತ್ತಿದ್ದಂತೆ ಅದು  ಕಾಲಿಗೆ ಬುದ್ಧಿ ಹೇಳಿದ್ದು ಗೊತ್ತಾಯಿತು.

ದೆವ್ವವನ್ನು ಬಿಟ್ಟರೆ ನಮಗೆ ತುಂಬಾ ಭಯ ಹುಟ್ಟಿಸುತ್ತಿದ್ದ ವಿಷಯವೆಂದರೆ ನಾವು ಎಂದೂ ಕಣ್ಣಾರೆ ನೋಡದ ಗುಮ್ಮನದು. ನಾವು ಊಟಮಾಡದೇ ತೊಂದರೆ ಕೊಟ್ಟರೆ ಅಥವಾ ಅಳುವುದನ್ನು ನಿಲ್ಲಿಸದಿದ್ದರೆ ಗುಮ್ಮನನ್ನು ಕರೆದು ಬಿಡುವುದಾಗಿ ಹೆದರಿಸುವುದು ಮಾಮೂಲಿಯಾಗಿ ಬಿಟ್ಟಿತ್ತು. ಗುಮ್ಮ ನಡು ರಾತ್ರಿಯಲ್ಲಿ ಕೂಗುತ್ತಿರುವುದನ್ನು ನಾವು ಎಷ್ಟೋ ಬಾರಿ ಕೇಳಿ ಭಯಪಟ್ಟಿದ್ದೆವು. ಇಷ್ಟು ಮಾತ್ರವಲ್ಲ. ಶ್ರೀಕೃಷ್ಣ ಪರಮಾತ್ಮನೇ ಗುಮ್ಮನಿಗೆ ಹೆದರುತ್ತಿದ್ದನೆಂದು ನಮಗೆ ಗೊತ್ತಿತ್ತು. ಏಕೆಂದರೆ ನಮ್ಮ ಅಕ್ಕಂದಿರು ನಮಗೆ ತೊಟ್ಟಿಲಲ್ಲಿ ಜೋಗುಳ ಹಾಡುವಾಗ "ಅಮ್ಮಾ ನೀನು ಗುಮ್ಮನಾ ಕರೆಯದಿರೇ " ಎಂಬ ದಾಸರ ಪದವನ್ನು ಹಾಡುವುದನ್ನು ನಾವು ಕೇಳಿದ್ದೆವು. ದೇವರೇ ರೀತಿ ಗುಮ್ಮನಿಗೆ  ಹೆದರುತ್ತಿದ್ದನ್ನು  ಕೇಳಿದ ನಮಗೆ ಗುಮ್ಮನ ಬಗ್ಗೆ ತುಂಬಾ ಭಯವಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ. ನಾವು ದೊಡ್ಡವರಾದ ನಂತರವೇ ನಮಗೆ ಗುಮ್ಮನೆಂದರೆ ಕೇವಲ ಯಾರಿಗೂ ಹಾನಿಮಾಡದ ಹಾಗೂ ರಾತ್ರಿ ಮಾತ್ರ ಕಣ್ಣು ಕಾಣುವ ಗೂಗೆಯೆಂದು ಗೊತ್ತಾಯಿತು.

----ಮುಂದುವರಿಯುವುದು ----