Wednesday, May 14, 2014

ನವಯುಗ

ನವಯುಗ

ನವಯುಗ ಪದ್ದತಿ ನವ ಸ್ತ್ರೀಪುರುಷರ
ನವರಂಗಾಟಗಳ್ ಹೆಚ್ಚಾಯ್ತು
ನವ ನವೀನ ಕೌತುಕ ಜಗವಾಯ್ತು
ನವ ಲಾವಣಿಯೊಂದಿದು ಬಯಲಾಯ್ತು
ಕಾವಿಯ ಧರಿಸಿದ ಕಪಟ ಸನ್ಯಾಸಿಯ
ವಿಚಾರತ್ವಗಳತಿಯಾಯ್ತು !

ಕನ್ನಡ ನಾಡಿನ ಕನ್ನಡ ಜನರಿಗೆ
ಕನ್ನಡ ಭಾಷೆಯೆ ಮರೆತೋಯ್ತು!
ವರ ಕನ್ನಡ ಇಂಗ್ಲಿಷ್ ಬೇರೆದೋಯ್ತು
ಘನ ಹೊನ್ನಿನ ದೇಶವು ಮಣ್ಣಾಯ್ತು !
ತಿನ್ನಲು ಮನೆಯಲಿ ಸೊನ್ನೆ ಗಳಾದರೂ
ಉನ್ನತ ಶೋಕಿಯು ಬಲವಾಯ್ತು !

ಜೆಂಟಲ್  ಮನ್ ಗಳ ಗಂಟಲ್ ಗಾಣ
ಕಂಠಕೆ ಕಾಲರ್ ಬಿಗಿದಾಯ್ತು
ನಿಜ ಒಂಟೆಯ ಕತ್ತಿನ ತೆರವಾಯ್ತು
ಕಂಟ ಕಳೆವ ಶ್ರೀಕಂಠನ  ಧ್ಯಾನವು
ಜೆಂಟಲ್  ಮನ್ಗಳಿಗಿರದೋಯ್ತು

ಊಟಕೆ ಟೇಬಲ್  ಪಾಠಕೆ ಬೈಬಲ್
ಆಟಕೆ ಇಸ್ಪೇಟೆ ಆಗೋಯ್ತು
ವರ ಮೋಟಾರ್ ವಾಕಿಂಗ್ ಶುರುವಾಯ್ತು
ವರ ಬೇಬಿ ಸಿಗರೆಟ್ ಸೇದಾಯ್ತು
ಹೋಟೆಲ್ ತಿಂಡಿಯು ನಾಟಕ ಸಿನಿಮಾ
ಕಾಟಗಳೆಷ್ಟೋ ಹೆಚ್ಚಾಯ್ತು
                                                                 -ಎ . ವಿ . ಕೃಷ್ಣ ಮೂರ್ತಿ
                                                            15-05-2014


ಇದು ನಾನು ಬರೆದ ಹೊಸ ಪದ್ಯವಲ್ಲ. ನಾನು ಎರಡನೇ ತರಗತಿಯಲ್ಲಿದ್ದಾಗ ಓದಿದ ಅಣ್ಣ ತಂದ ಲಾವಣಿ ಪುಸ್ತಕದಲ್ಲಿದ್ದದ್ದು (೧೯೫೫-೧೯೫೬).. ವಿಶೇಷವೆಂದರೆ ಇವತ್ತಿನ ಕಾಲಕ್ಕೂ ಅನ್ವಯವಾಗುನಂತದ್ದು . ಪೂರ್ತಿ ಲಾವಣಿ ನೆನಪಿನಲ್ಲಿಲ್ಲ.  ನೆನಪಿದ್ದಷ್ಟು  ಮಾತ್ರ ಬರೆದಿರುವೆ .

No comments: