ಓ ಪುಟ್ಟ ಪೋರ
ನಮ್ಮ ಈ ಕಬೀರ
ಅಹುದು ಇವನು ಶೂರ
ಇವನ ಚೇಷ್ಟೆ ಅಪಾರ!
ಓಡುತಿಹನು ಸರಸರ
ಕೈಗೆ ಸಿಗದೆ ದೂರ!
ಎಷ್ಟು ಇವನ ಸಡಗರ?
ಇವನಿಗಿಲ್ಲ ಮುಜುಗರ!
ಇವನ ಬುದ್ದ್ಹಿ ಚಂಚಲ
ನೋಡಿ ಇವನ ಚಪಲ!
ಇವನದೆಂತ ಊಟ
ಮಾಡಿಸುವರ ಪೇಚಾಟ!
ಒಮ್ಮೆ ಬಾಯಿ ತೆರೆವ
ಒಮ್ಮೆ ಮುಚ್ಚಿ ಬಿಡುವ!
ಇವನು ಬಹಳ ತುಂಟ
ಆಗಿಹನು ರಾಮ ಬಂಟ!
ಇವನ ಪಯಣ ದೂರ
ದಾಟಿ ಬಂದ ಸಾಗರ!
ಇವನ ಅಪ್ಪ ಅಮ್ಮ
ಅದುವೆ ಇವನ ಪ್ರಪಂಚ
ಬೇರೆಯವರಿಗಲ್ಲಿ ಜಾಗ
ಕೊಂಚ ಕೊಂಚ ಕೊಂಚ!
----ಎ ವಿ ಕೃಷ್ಣಮೂರ್ತಿ
೨೯ ಅಕ್ಟೋಬರ್ ೨೦೧೩
No comments:
Post a Comment