Wednesday, December 18, 2013

ಅಕ್ಕನ ನೆನಪು


ಎನಿತು ದೂರವೋ
ನಿನ್ನಯ ಪಯಣ
ಬಲ್ಲವನೊಬ್ಬನೇ
ಆ ವೆಂಕಟರಮಣ !

ಅಹುದು ನಿನ್ನದು
ನಿಜ ಸುಖಮರಣ
ಇರದೇ ಹೋಯಿತು
ಆ ದೇವಗೆ ಕರುಣ !

ತೆರೆದಿಹ ನಿನಗೆ
ಸ್ವರ್ಗದ ದ್ವಾರ
ಓ ದೇವನೆ ನಿನಗೆ
ಬೇಕಿತ್ತೇ ಈ ಅವಸರ?

ಅಕ್ಕನ ಮನದ
ಆಸೆಗಳು ನೂರು
ಈಡೇರಿಸುವವ
ನೀನಲ್ಲವೇ ದೇವರು?

ಎಲ್ಲ ಆಸೆಗಳ
ನಡುವೆ ನೀನು
ಒಂದಾಸೆಯನು
ತೀರಿಸಿದೆಯೇನು?

ಅಹುದು ಅದುವೇ
ಮುತ್ತೈದೆ ಸಾವು!
ನೀಡಿದೆ ನಮಗೆ
ಈಪರಿ ನೋವು  

ಹುಟ್ಟು ಸಾವಿನ  
ನಿಗೂಢ  ಅಂತರ!
ಅಕ್ಕನ ನೆನಪು
ನಮಗೆ  ನಿರಂತರ
                      ಎ ವಿ ಕೃಷ್ಣಮೂರ್ತಿ
                       

No comments: