Wednesday, August 14, 2013

ನನ್ನ ಪ್ರೀತಿಯ ತಂಗಿ ಲೀಲಾ


ಆಗಿದ್ದರೂ ನಿನ್ನ ಹೆಸರು ಲೀಲಾ
ನಾವೆಲ್ಲ ಕರೆಯುತಿದ್ದೆವು 'ವಿಶಾಲಾ'
ಗೊತ್ತಿಲ್ಲ ನಮಗದರ ಮೂಲ 
ಹಾಗಿತ್ತು ಆ ಒಂದು  ಕಾಲ !

ನಮ್ಮ ಮನೆಯದು ಅಡೇಖಂಡಿ
ಬರದು ಇಲ್ಲಿಗೆ ಯಾವ ಬಂಡಿ
ಓಣಿಯೊಂದಿದೆ ಗಂಡಾಗುಂಡಿ
ಬಂದರೆ ಆಗುವೆ ನೀ ಸುಪಾಂಡಿ!

ನನಗೆ ನೀನೊಬ್ಬಳೇ ತಂಗಿ
ಆಗಿದ್ದೆ  ನಾನೊಬ್ಬ ಏಕಾಂಗಿ
ಹಾಕಲಿದ್ದಿತು ಒಂದೇ ಅಂಗಿ!
ಹೊಡೆದಿಲ್ಲ ನಾನೇನು ಡೋಂಗಿ!

ಶೃಂಗೇರಿಯಲಿ  ನಿನ್ನ ಮದುವೆ 
ಎಷ್ಟೊಂದು ಸಡಗರದ ನಡುವೆ 
 ನೆನೆದಾಗ ಮನಕೆ ಆಹ್ಲಾದ 
ನಿನ್ನ ಪತಿಯ ಹೆಸರು ಪ್ರಹ್ಲಾದ!

ನಿನ್ನ ಮೊದಲ ಮಗಳು ವಿದ್ಯಾ
ಆಮೇಲೆ ಹುಟ್ಟಿದಳು ಸಂಧ್ಯಾ
ಮೈಸೂರಲಿ  ನೀನಿರುವೆ ಸದ್ಯ
ಬರೆದಿರುವೆ ನಿನಗಾಗಿ ಈ ಪದ್ಯ

       -ಎ. ವಿ . ಕೃಷ್ಣಮೂರ್ತಿ 

No comments: