Saturday, July 28, 2018

Reviews : ಒಂದು ಊರಿನ ಕಥೆ (ಹೊಕ್ಕಳಿಕೆ)

ಒಂದು ವಿಮರ್ಶೆ : ಒಂದು ಊರಿನ ಕಥೆ  (ಹೊಕ್ಕಳಿಕೆ)

ಲೇಖಕರು ತಮ್ಮ ಬಾಲ್ಯದ ವಿದ್ಯಾಭ್ಯಾಸ  ಹಾಗೂ ಸರಳ ಜೀವನ ಕುರಿತು ವಿವರವಾಗಿ ಬರೆದಿದ್ದಾರೆ.  ಇದು ಒಂದು ಊರಿನ ಕಥೆಎಂಬ ಬಾಲ್ಯದ ಪುಟ್ಟ ಕಥನ.
ಹೊಕ್ಕಳಿಕೆ ಎನ್ನುವ ಪುಟ್ಟ ಊರಿನ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಹಾಗೂ ಶ್ರಮಜೀವಿ ಗ್ರಾಮಸ್ಥರ ಬದುಕಿನ ಚಿತ್ರಣವನ್ನು ನಾವು ಇಲ್ಲಿ ಕಾಣುತ್ತೇವೆ. ಸ್ವಾರಸ್ಯಕರ ಅಂಶವೆಂದರೆ ಗರ್ಭಸ್ಥ ಶಿಶುವಿಗೆ ಹೊಕ್ಕಳಬಳ್ಳಿ ಹೇಗೆ ಸಂಜೀವಿನಿಯಾಗಿದೆಯೋ ಹಾಗೆಯೇ ಹೊಕ್ಕಳಿಕೆಯಲ್ಲಿನ ಲೇಖಕರ ಬಾಲ್ಯದ ಅನುಭವ ನಮ್ಮೆಲ್ಲ ಓದುಗರಿಗೆ ಒಂದು ಅನಿರ್ವಚನೀಯ  ಆನಂದವನ್ನು ನೀಡುತ್ತದೆ. ತಿಳಿಹಾಸ್ಯದ ಮೆರುಗು ಹಿತಮಿತವಾಗಿ ಮಿಂಚುತ್ತದೆ. ಲೇಖಕರ ಬಾಲ್ಯದ ಅನುಭವದಲ್ಲಿ ಎದ್ದು ಕಾಣುವ ಅಂಶವೆಂದರೆ ಎಲ್ಲೂ ಋಣಾತ್ಮಕವಾಗಿ ಚಿಂತಿಸದೇ ಧನಾತ್ಮಕವಾಗಿ ಬೆಳೆದು ಬಂದ  ರೀತಿ. ತನ್ನ ಹಿರಿಯ ಸೋದರ, ಹಿರಿಯಕ್ಕಂದಿರ ಸಹಕಾರ , ಕಿರಿಯ ಸೋದರನ ಸಮಗ್ರ ವ್ಯಕ್ತಿತ್ವದ ಸೆಲೆಯಾಗಿ ಮುಂದಿನ ಯಶಸ್ವೀ ಬದುಕಿಗೆ ನೆಲೆಯಾಗಿ ನಿಂತದ್ದು. ಅಂಶಗಳನ್ನು ಲೇಖಕರು ಮನಮುಟ್ಟುವಂತೆ ಚಿತ್ರಿಸಿದ್ದಾರೆ.
ಗ್ರಾಮೀಣ ಬದುಕನ್ನು ನಡೆಸಿದವರಿಗೇ  ಅದರ ಸವಿ ಅರಿವಾಗುವುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಾವೇ ಇದರ ಪಾತ್ರಧಾರಿಗಳಾಗುತ್ತೇವೆ. ಪ್ರತಿ ವ್ಯಕ್ತಿಗಳೂ ನಮಗೆ ಚಿರಪರಿಚಿತರೆಂದು ಭಾಸವಾಗುತ್ತದೆ. ಆತ್ಮ ಕಥನದಲ್ಲಿ ನಾಯಕ ಬಾವಿಯಲ್ಲಿ ಮುಳುಗಿದಾಗ ನಾವೇ ಅದರ ಅನುಭವ ಪಡೆಯುತ್ತೇವೆ. ವಿಸ್ಮಯವೆಂದರೆ ಬಡ ಕಮಲಾ ಶೆಡ್ತಿಯ ಸೊಪ್ಪಿನ ರಸದ ಮಹಿಮೆಯನ್ನು ಸಹ ಬಿಡದೆ ನೆನಪಿಟ್ಟುಕೊಂಡ ಪರಿ, ಸುತ್ತಮುತ್ತಲಿನ ಹಳ್ಳಿಗಳ ಹೆಸರನ್ನುಓರಣವಾಗಿ ಮುತ್ತು ಪೋಣಿಸಿ  ಹಾರ ಮಾಡಿದಂತೆ , ಎಲ್ಲೂ ಎಡವದೆ ಹಳ್ಳಿಗಳ ನಾಮಾವಳಿಯನ್ನು ಪ್ರಸ್ತಾಪಿಸಿದ ರೀತಿ ಬೆರಗನ್ನು ಮೂಡಿಸುತ್ತದೆ.
'ಅಣ್ಣನಿಲ್ಲದ ಮನೆ ಎಣ್ಣೆಯಿಲ್ಲದ ದೀಪ ' ಲೇಖಕರ  ಚೊಚ್ಚಲ ಕವನ. ಇಲ್ಲಿ ಅಣ್ಣನ ಮೇಲಿನ ಪ್ರೀತಿಯನ್ನೇ ತೈಲ ಧಾರೆಯಾಗಿಸಿ ವ್ಯಕ್ತಿತ್ವವನ್ನು ಬೆಳಕಿನ ಹಣತೆಯಾಗಿಸಿದ ಸಾರ್ಥಕತೆ ಭಾಸವಾಗುತ್ತದೆ. ಹೆಜ್ಜೆ ಹೆಜ್ಜೆಗೆ ತಿದ್ದಿ ತೀಡಿ ಪ್ರೇಮದಿಂದ ತಮ್ಮನನ್ನು ಓರ್ವ ಯೋಗ್ಯ ವ್ಯಕ್ತಿಯಾಗಿಸಿದ ಗೌರಕ್ಕ ಹಾಗೂ ರುಕ್ಮಿಣಿಯಕ್ಕನವರ ಕುರಿತು ಬರೆದ ಕವನ ಎಂತಹವರ ಹೃದಯವನ್ನೂ ತಟ್ಟದೇ ಬಿಡದು. 
ಕೊನೆಯವರೆಗೆ ಎಡೆಬಿಡದೆ ಓದಿಸಿಕೊಂಡು ಹೋಗುವ ಸರಳ ಸುಂದರ ಕಥೆ ಮಳೆಯಿಂದ ತಂಪಾದ ಇಳೆಯಂತೆ ನಮ್ಮ ಮನಸ್ಸನ್ನು ತಂಪಾಗಿಸುತ್ತದೆ. ತುಟಿಯು ಪ್ರಸನ್ನತೆಯಿಂದ ಅರಳಿದರೂ ಕೊನೆಗೆ ತನ್ನ ಅಣ್ಣ, ಅಕ್ಕಂದಿರ ಮೇಲೆ ಕವನ ಬರೆದುದನ್ನು ಓದಿ ಕಣ್ಣೀರೂ ಹರಿಯುತ್ತದೆ. ಒಟ್ಟಿನಲ್ಲಿ ನನ್ನ ಬಾಲ್ಯವನ್ನು ಪುನಃ ಮರುಕಳಿಸುವಂತೆ ಮಾಡಿದ ಲೇಖನಕ್ಕೆ ಮನಃ ಪೂರ್ವಕ ಧನ್ಯವಾದಗಳು.
ಇಂತಹ ಉತ್ತಮ ಕಥೆಯಲ್ಲಿ ಮಲೆನಾಡಿನ ಜೀವನ ಸಂಪ್ರದಾಯ, ಬೆಲೆ, ಪ್ರಕೃತಿ ಹಾಗೂ ರುಚಿಕಟ್ಟಾದ ಗ್ರಾಮೀಣ ತಿಂಡಿ ತೀರ್ಥದ ಮಾಹಿತಿ ಇದ್ದರೆ ಇನ್ನೂ ಖುಷಿಯಾಗುತ್ತಿತ್ತು. ಗ್ರಾಮೀಣ ಹಳ್ಳಿಗಾಡಿನ ಸೊಗಡನ್ನು ತಾವು ಬರೆಯುವಂತಾಗಲಿ ಎಂದು ನಾನು ಹಾರೈಸುತ್ತೇನೆ.
ವಿನಯಾ ರಾವ್
ಒಂದು ಊರಿನ ಕಥೆ  (ಹೊಕ್ಕಳಿಕೆ) – A Review
Ondu oorina kathe is a commendable effort to pay homage to the place where author had spent his childhood years.  The fact that this is not a story of 3 or 4 pages but is a short novel says a lot about the deep attachment the author has to his sisters as well as the village, it’s people and the experiences.

The narrative style and dividing the plot into chapters reminded me of the novels we had read as part of our Kannada curriculum in school days.  Very clear and descriptive narration makes it easy to read and grasp.   It is very refreshing and informative to read about the simple but self-sufficient lifestyle of a tiny village and the transformation it undergoes as the time passes by.  Story does not revolve around one place but extends to surrounding villages too. I particularly liked the story about Adi Shankaracharya and Sharada Devi. 

Reading between the lines, we can get a glimpse about the important role women played in families. After the wedding, they did not discontinue caring about their maternal house.  On the other hand, they welcomed their siblings to their homes and helped in their care and education.  They had independence to do that and same independence was exercised while dealing with the members of her husband’s family.  Even though the spouses had disagreements with their siblings, wives continued to have good relationship thereby keeping the family together in spite of the disagreements. 

I enjoyed reading the poems too especially the last one regarding Rukminakka.  It was very emotional and conveyed the emptiness one feels when one loses a sister who was the light of her home.

A.V.Krishna Murthy is really good in his command over language considering that it is his first attempt to write in Kannada and I hope that he will continue to write in Kannada.
Mrinalini
New Zealand

Birth and death and in between life.  The life experience of each person differs.  Having born  in the midst of brothers and sisters (both younger and elders) you had the privilege of living in a large family and keenly observed each one's  life closely.  But experiences of persons would be lost once he is no more in the society.  But you ensured that your 
wide and rare experiences are recorded by your writings which will remain for generations to look back.  The love, affection, emotions, trust, belongings and attachment which your generation had, perhaps, the future generations would not be able to understand due to ever increasing materialistic and self centered life that is unknowingly practiced by the next generation.   Your writings will surely have value in the days to come.

You have emotionally and touchingly written "ONDU OORINA KATHE HOKKALIKE".  The ending episode is simply excellent.  It is an excellent tribute to your sisters.  May their soul always rest in eternal peace!

Arundhathi and myself always enjoyed reading your writings.  We look forward for new episode.  We also wish that your writings will be published in the book form for making the life of your valued writings a permanent record. 
With best wishes, 
B. G. Rao

Thank you Bhava. Enjoyed reading all the episodes.
It was really very inspiring, appealing and interesting, with  the right mix of humor... throughout.....!

rgds...raja
(Rajgopal Tholpadi)