ಅಧ್ಯಾಯ ೫
ಶಂಕರ್
ಮೋಟಾರ್ ಟ್ರಾನ್ಸ್ಪೋರ್ಟ್ ಕಂಪನಿ
ಮೊದಲು ಲೋಕಸೇವಾ ನಿರತ ಎಂ
ಸ್ ದೇವೇಗೌಡರ (ದ್ಯಾವೇ
ಗೌಡರ) ಒಡೆತನದಲ್ಲಿತ್ತಂತೆ. ಅವರು
ಅದನ್ನು ಉಡುಪಿ ಮೂಲದ ಆರೂರು
ಲಕ್ಷ್ಮೀನಾರಾಯಣ ರಾವ್ (ಎ
ಎಲ್ ನ್ ರಾವ್ ) ಅವರ
ಕಂಪನಿಗೆ ಲೀಸ್
ಮಾಡಿ ಕೊಟ್ಟರಂತೆ. ಪ್ರಾಯಶಃ ಅದು ೧೯೫೦ನೇ
ಇಸವಿಯ ಹತ್ತಿರದಲ್ಲಿರಬೇಕು. ಎ ಎಲ್ ನ್
ರಾವ್ ಅವರ ಒಡೆತನದಲ್ಲಿ ನನಗೆ ತಿಳಿದಂತೆ
ದಕ್ಷಿಣ ಕನ್ನಡದ ಶಂಕರ್ ವಿಠಲ್ ಮೋಟಾರ್ ಸರ್ವಿಸ್ ಮತ್ತು ಶಿವಮೊಗ್ಗೆಯ ಯುನೈಟೆಡ್ ರೋಡ್ವೇಸ್ ಕೂಡಾ
ಸೇರಿದ್ದುವು. ಆಮೇಲೆ ಮಾಂಡೋವಿ ಮೋಟಾರ್ ಕೂಡ ಪ್ರಾರಂಭವಾಯಿತು. ಈ ಕಂಪೆನಿಗಳೆಲ್ಲಾ ತುಂಬಾ ವೃತ್ತಿಪರವಾಗಿ
ಹಾಗೂ ಲಾಭದಾಯಕವಾಗಿ ನಡೆಯುವಂತೆ ಆಡಳಿತ ವರ್ಗ ನೋಡಿಕೊಳ್ಳುತ್ತಿತ್ತು.
ಆ
ದಿನಗಳಲ್ಲಿ ಕೆಲವು ಶ್ರೀಮಂತರು
ಕೇವಲ ಒಂದೊಂದೇ ಬಸ್ ಓಡಿಸುವ
ಲೈಸೆನ್ಸ್ ಪಡೆದು ವ್ಯವಹಾರ ನಡೆಸುತ್ತಿದ್ದರಂತೆ.
ಆದರೆ ಶಂಕರ್ ಟ್ರಾನ್ಸ್ಪೋರ್ಟ್ ನೀಡುತ್ತಿದ್ದ
ತೀವ್ರ ಪೈಪೋಟಿಯ ಮುಂದೆ ಅವುಗಳು
ಕ್ರಮೇಣ ನಷ್ಟ ಅನುಭವಿಸ ತೊಡಗಿದವಂತೆ.
ಇಂತಹ ಬಸ್ಸುಗಳ ಹಿಂದೊಂದು ಮುಂದೊಂದು
ಶಂಕರ್ ಬಸ್ ಓಡಿಸುವುದರ ಮೂಲಕ
ಅವುಗಳ ಕಲೆಕ್ಷನ್ ಸಂಪೂರ್ಣ ಬಿದ್ದುಹೋಗುವಂತೆ ಮಾಡಲಾಯಿತಂತೆ.
ಆ ಬಸ್ಸುಗಳ ಮಾಲೀಕರು
ಕೊನೆಗೆ ತಮ್ಮ ಬಸ್ಸುಗಳನ್ನು ಲೈಸನ್ಸ್
ಸಮೇತ ಶಂಕರ್ ಕಂಪನಿಗೆ ಮಾರಿಬಿಟ್ಟರಂತೆ.
ನಾವು
ನೋಡಿದಂತೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಬೆಳಿಗ್ಗೆ ೮ ಗಂಟೆಗೆ ಮಲ್ಲಿಕಾರ್ಜುನ
ಎಂಬ ಬಸ್ ಹೊರಡುತ್ತಿತ್ತು. ಮತ್ತು
ಶಾರದಾಂಬ ಎಂಬ ಬಸ್ ಶೃಂಗೇರಿಯಿಂದ
ನಮ್ಮ ಬಿ ಜಿ ಕಟ್ಟೆಗೆ
೧೧ ಗಂಟೆಯ ವೇಳೆಗೆ ಬರುತ್ತಿತ್ತು.
ಅದು ಮುಂದೆ ಚಿಕ್ಕಮಗಳೂರಿಗೆ ಹೋಗುತ್ತಿತ್ತು.
ಹಾಗೆಯೇ ಶೃಂಗೇರಿಯಿಂದ ಬೆಳಿಗ್ಗೆ ೫ ಗಂಟೆಗೆ ಮ್
ಪಿ ಮ್ ಎಂಬ ಬಸ್
ಬೀರೂರಿಗೆ ಹೊರಡುತ್ತಿತ್ತು. ಆದರೆ ಈ ಬಸ್ಸುಗಳೆಲ್ಲಾ
ಶಂಕರ್ ಕಂಪನಿಗೆ ಸೇರಿದ್ದುವು. ಪ್ರಾಯಶಃ
ಆ ಹೆಸರುಗಳು ಅವುಗಳ
ಮೊದಲಿನ ಮಾಲೀಕರು ಇಟ್ಟ ಹೆಸರುಗಳಾಗಿರಬೇಕು.
ಉದ್ದ ಮೂತಿಯ ಬಸ್ಸುಗಳು
“ಮುಂಡು” ಬಸ್ಸುಗಳಾದುದು!
ಒಂದು
ಕಾಲದಲ್ಲಿ ಬಸ್ಸು ಮತ್ತು ಲಾರಿಗಳಿಗೆ
ಎಂಜಿನ್ಗಳು ಅವುಗಳ ಮುಂದೆ ಚಾಚಿದ
ಮೂತಿಯಲ್ಲಿ ಇರುತ್ತಿದ್ದವು. ಅವುಗಳನ್ನು ಸ್ಟಾರ್ಟ್ ಮಾಡಲು ಒಂದು ಕಬ್ಬಿಣದ
ರಾಡ್ ಮೂತಿಯಲ್ಲಿ ತೂರಿಸಿ ತಿರುಗಿಸ ಬೇಕಾಗಿತ್ತು.
ಹೊಸದಾಗಿ ಬರುವ ಬಸ್ಸುಗಳಿಗೆ ಮೂತಿಯಿಲ್ಲದ್ದರಿಂದ
ಅವುಗಳನ್ನು "ಮುಂಡು " ಬಸ್ಸುಗಳೆಂದು ಕರೆಯಲಾರಂಭವಾಯಿತು. ಅವುಗಳ
ಎಂಜಿನ್ ಡ್ರೈವರ್ ಸೀಟಿನ ಹತ್ತಿರವೇ
ಇದ್ದು ಕೀಲಿಕೈ ತಿರುಗಿಸುವ ಮೂಲಕ
ಸ್ಟಾರ್ಟ್ ಮಾಡಲು ಅನುಕೂಲವಿತ್ತು. ನಾವು
ಬಸ್ ನೋಡುವ ವೇಳೆಗೆ ಉದ್ದ
ಮೂತಿಯ ಬಸ್ಸುಗಳು ಕೇವಲ ಎರಡು ಅಥವಾ
ಮೂರು ಮಾತ್ರಾ ಇದ್ದುವು. ಅವುಗಳನ್ನು
ಹೆಚ್ಚು ಘಾಟಿಯಿರುವ ರಸ್ತೆಗಳಲ್ಲಿ ಓಡಿಸಲಾಗುತ್ತಿತ್ತು. ಅದರಲ್ಲಿ ಕೊಪ್ಪದಿಂದ ಕಳಸಕ್ಕೆ
ಹೋಗುವ ಬಸ್ ಒಂದು. ಆ
ಬಸ್ಸಿನ ಡ್ರೈವರ್ ತಿಮ್ಮಪ್ಪ ಬಸರೀಕಟ್ಟೆ
ಕಳಸ ಮಾರ್ಗದಲ್ಲಿ ತುಂಬಾ ಪ್ರಸಿದ್ಧನಾಗಿದ್ದ. ಯಾರು
ಎಲ್ಲಿ ಕೈ ತೋರಿಸಿದರೂ ಬಸ್
ನಿಲ್ಲಿಸುತ್ತಿದ್ದ ತಿಮ್ಮಪ್ಪ, ಆ ಮಾರ್ಗದಲ್ಲಿ ಮಾಮೂಲಾಗಿ
ಪ್ರಯಾಣಿಸುವ ಜನರ ಹೆಸರುಗಳನ್ನೂ ಹೇಳಬಲ್ಲವನಾಗಿದ್ದ.
ಅಲ್ಲದೆ ಅವರ ಸಾಮಾನುಗಳನ್ನು ಬಸ್ಸಿನಿಂದ
ಇಳಿಸಲು ತುಂಬಾ ಸಹಕಾರ ನೀಡುತ್ತಿದ್ದ.
೧೯೬೨ನೇ ಇಸವಿಯಲ್ಲಿ ನನ್ನ ಉಪನಯನಕ್ಕೆ
ಹೊರನಾಡಿಗೆ ಹೋಗುವಾಗ ತಿಮ್ಮಪ್ಪನ ಬಸ್ಸಿನಲ್ಲಿ
ಕಳಸದವರೆಗೆ ಪ್ರಯಾಣ ಮಾಡಿದ್ದು ನೆನಪಿಗೆ
ಬರುತ್ತಿದೆ.
ತಿಮ್ಮಪ್ಪನಷ್ಟೇ
ಪ್ರಸಿದ್ಧನಾಗಿದ್ದ ಇನ್ನೊಬ್ಬ ಡ್ರೈವರ್ ಅಂದರೆ ಮಲ್ಲಿಕಾಜುನ
ಬಸ್ಸಿನ ಎಲ್ಲಪ್ಪ. ಆಜಾನುಬಾಹು ಎಲ್ಲಪ್ಪ "ಮಾತು ಕಡಿಮೆ ಹೆಚ್ಚು
ದುಡಿಮೆ" ಎಂಬ ತತ್ವ ಪಾಲಿಸುತ್ತಾ
ತುಂಬಾ ಗಾಂಭೀರ್ಯದಿಂದ
ಬಸ್ ನಡೆಸುತ್ತಿದ್ದ . ಆ ಕಾಲದಲ್ಲಿ ಹಲವು
ವರ್ಷ ನಮ್ಮ ತಂದೆ ಅಥವಾ
ದೊಡ್ಡ ಅಣ್ಣ ಪ್ರತಿ ಮಂಗಳವಾರ
ಒಂದು ಎತ್ತಿನ ಗಾಡಿಯಷ್ಟು ಬಾಳೆಕಾಯಿಗಳನ್ನು
ಚಿಕ್ಕಮಗಳೂರು ಸಂತೆಗೆ ತೆಗೆದುಕೊಂಡು ಹೋಗುತ್ತಿದ್ದರು.
ಆ ದಿನಗಳಲ್ಲಿ ಬಸ್ ಕಂಡಕ್ಟರ್ ಡ್ಯೂಟಿಯಲ್ಲಿ
ಪ್ರಯಾಣಿಕರ ಸಾಮಾನುಗಳನ್ನು ಬಸ್ಸಿನ ಟಾಪ್ ಮೇಲೆ
ಹಾಕುವುದೂ ಸೇರಿತ್ತು. ಆದರೆ ಸ್ವಲ್ಪ ವರ್ಷಗಳ
ನಂತರ ಅವನ ಆ ಜವಾಬ್ದಾರಿಯನ್ನು
ತೆಗೆದು ಹಾಕಲಾಯಿತು. ಸಾಮಾನ್ಯವಾಗಿ ಎಲ್ಲಪ್ಪನ ಮಲ್ಲಿಕಾಜುನ ಬಸ್ಸಿನಲ್ಲೇ ಅದನ್ನು ಒಯ್ಯಲಾಗುತ್ತಿತ್ತು. ಎಲ್ಲಪ್ಪ
ತುಂಬಾ ಸಹಕಾರ ನೀಡುತ್ತಿದ್ದುದು ನಮಗೆ
ಗೊತ್ತಾಗುತ್ತಿತ್ತು. ಹಾಗೆಯೆ ನಮ್ಮೂರಿನಿಂದ ಕೆಲವು ಮದುವೆ ದಿಬ್ಬಣಗಳು
ಎಲ್ಲಪ್ಪನ ಬಸ್ಸಿನಲ್ಲಿ ಆಗುಂಬೆ ಮತ್ತಿತರ ಊರುಗಳಿಗೆ
ಹೋಗಿದ್ದವು. ಎಲ್ಲಪ್ಪ ನಮ್ಮೂರ ರಸ್ತೆ ಚೆನ್ನಾಗಿಲ್ಲದಿದ್ದರೂ ಬೆಳವಿನಕೊಡಿಗೆ
ಮನೆಯವರೆಗೆ ಬಸ್ ತರುತ್ತಿದ್ದ. ಅವನು
ಡ್ರೈವರ್
ಕೆಲಸ ಮಾತ್ರವಲ್ಲದೇ ಬೇರೆ ಬಿಸಿನೆಸ್ ಕೂಡ
ಮಾಡಿ ತುಂಬಾ ಹಣ ಗಳಿಸುತ್ತಿದ್ದನೆಂದು
ಮುಂದೆ ನಮಗೆ ತಿಳಿದು ಬಂತು.
ಆದರೆ ಅವನು ತನ್ನ ವೃತ್ತಿಯಲ್ಲಿ
ಮಾಡುತ್ತಿದ್ದ ಉನ್ನತ ಮಟ್ಟದ ಸೇವೆ
ಎಂದೂ ಮರೆಯುವಂತದಲ್ಲ.
ಶಂಕರ್ ಕಂಪನಿಯ
ಏಕಸ್ವಾಮ್ಯತೆ
ಕೊಪ್ಪದಿಂದ ಚಿಕ್ಕಮಗಳೂರಿಗೆ ಹೋಗುವ ಜಯಪುರ ಮತ್ತು
ಬಾಳೆಹೊನ್ನೂರು ಮಾರ್ಗದಲ್ಲಿ
ಶಂಕರ್ ಕಂಪನಿಯ ಏಕಸ್ವಾಮ್ಯತೆ
(monopoly) ಇತ್ತು. ಅದನ್ನು
ಕಂಪನಿ ತುಂಬಾ ಜೋಪಾನವಾಗಿ ಕಾಯ್ದುಕೊಂಡಿತ್ತು.
ಆದರೆ ಶಿವಮೊಗ್ಗೆಗೆ ನರಸಿಂಹರಾಜಪುರದ ಮೂಲಕ ಹೋಗುವ ಮಾರ್ಗದಲ್ಲಿ
ಅದಕ್ಕೆ ಉದಯ ಮೋಟಾರಿನ ಎರಡು
ಬಸ್ಸುಗಳು ಪೈಪೋಟಿ ನೀಡುತ್ತಿದ್ದವು. ಶಂಕರ್
ಕಂಪನಿಯ ಎಲ್ಲಾ ಬಸ್ಸುಗಳು ಟಾಟಾ
ಮರ್ಸಿಡಿಸ್ ಬೆನ್ಜ್ (Benz) ಬಸ್ಸುಗಳೇ ಆಗಿದ್ದವು. ಆದರೆ ಉದಯ ಮೋಟಾರ್
ಲೆಯ್ಲ್ಯಾಂಡ್ (Leyland) ಬಸ್ಸುಗಳನ್ನು ಓಡಿಸುತ್ತಿತ್ತು. ಅದರ ಹತ್ತಿರ ಒಂದೆರಡು
ಫಾರ್ಗೋ ಮತ್ತು ಡಾಡ್ಜ್ ಬಸ್ಸುಗಳೂ
ಇದ್ದುವು. ಶೃಂಗೇರಿ- ಕೊಪ್ಪ- ತೀರ್ಥಹಳ್ಳಿ-ಶಿವಮೊಗ್ಗ
ಮಾರ್ಗದಲ್ಲಿ ಕೇವಲ ಸಿ ಕೆ
ಮ್ ಸ್
(CKMS) ಕಂಪನಿ ಒಂದು ಲೆಯ್ಲ್ಯಾಂಡ್
ಬಸ್ಸನ್ನು ಓಡಿಸುತ್ತಿತ್ತು. ನನ್ನ ಶಿವಮೊಗ್ಗೆಯ ಮೊಟ್ಟ ಮೊದಲ
ಪ್ರಯಾಣ ೧೯೬೨ನೇ ಇಸವಿಯಲ್ಲಿ ಈ ಬಸ್ಸಿನಲ್ಲಿ
ಆಗಿತ್ತು. ಅದರ ಡ್ರೈವರ್ ೭
ಅಡಿ ಎತ್ತರದ ಆಜಾನುಭಾಹು. ಅವನ
ಪರ್ಸನಾಲಿಟಿ ಗಲಿವರನಂತೆ ತೋರುತ್ತಿತ್ತು. ಅವನು ಬಸ್ಸಿನಲ್ಲಿ ತಲೆ
ಬಗ್ಗಿಸಿ ಕುಳಿತುಕೊಳ್ಳಬೇಕಾಗುತ್ತಿತ್ತು!
----ಮುಂದುವರಿಯುವುದು ---
No comments:
Post a Comment