ಏ ಗೇಟ್ , ಬಿ
ಗೇಟ್ ,ಸಿ ಗೇಟ್ ಬೇಡ
ಜೆ ಗೇಟ್ ಎಂಬುದೇ ಸಾಕು
ನಮಗಿನ್ನು
ಬೇರೇನೂ
ಬೇಡ!
ಸೌತ್ ಎಂಡ್ ಮೆಟ್ರೋ
ಗೇಟಿನ ಹೊರಗೆ
ಇನ್ಫರ್ಮ್ಯಾಟಿಕ್ಸ್ ಎಂಬ ಕಂಪನಿಯ ಒಳಗೆ
ಏರಬೇಕು ನೀನು ನಾಲ್ಕನೇ
ಮಹಡಿ
ಅಲ್ಲಿಹುದು ನೋಡೋಂದು ಸಣ್ಣ ಕೊಠಡಿ
ಅಲ್ಲಿಹಳು ಜ್ಯೋತಿ ಎಂಬುವ ವೀರ
ಮಹಿಳೆ
ಊದುತಿಹಳು ಜೆ ಗೇಟಿನ ರಣ ಕಹಳೆ!
ನೋಡವಳ ತಂಡದ ಮೇಲಿನ
ಪ್ರೀತಿ
ಮೈಗಳ್ಳರಿಗೆ ಮಾತ್ರ ಉಂಟು ಪಜೀತಿ!
ಮಹಡಿಯ ಇನ್ನೊಂದು ಭಾಗದಲಿದೆ
ನೋಡು
ಜೆ ಗೇಟ್ ತಂಡದ
ಸಂಪೂರ್ಣ ಬೀಡು
ಈ ತಂಡದ ಒಡತಿಯ
ಹೆಸರು ಶೈಲಜ
ಹಾರಿಸುತಿಹಳು ನೋಡು ತಂಡದ ಗರುಢ ಧ್ವಜ!
ಶೈಲಜಳು ಒಬ್ಬ ಶಿಸ್ತಿನ ಸಿಪಾಯಿ
ಇವಳಿಗಿದೆ ನಾಯಕಿಯ ದರ್ಪ!
ಒಮ್ಮೊಮ್ಮೆ ತೋರುವಳು ಸ್ವಲ್ಪ ಕೋಪ
ತಣಿಯುವುದು ಬೇಗ ಅದರ ತಾಪ!
ಒಂದು ಮೂಲೆಯಲಿ ಕುಳಿತಿಹಳು
ಛಾಯಾ
ಮಾಡುತಿಹಳು ಎಲ್ಲ ಸಮಸ್ಯೆಗಳ ಮಾಯ!
ಇನ್ನೊಂದು ಮೂಲೆಯಲಿ ಕುಳಿತಿಹಳು ಲೇಖ
ನಾಟ್ಯ ರಾಣಿಯಿವಳು ಇವಳ
ಕೆಲಸಗಳು ಅನೇಕ!
ಕುಳಿತಿಹನು ನೋಡಲ್ಲಿ ಸ್ನೇಹಜೀವಿ ಕಿರಣ
ಕಾಯಕವೇ ಕೈಲಾಸ ಇವನ ಆಭರಣ!
ಬಾರದಿದ್ದರೆ ಇವನು ಯಾವುದೇ ಕಾರಣ
ತಂಡದ ಕಾರ್ಯ ಅನಿಸುವುದು ಬಣ
ಬಣ!
ನೋಡಲ್ಲಿ ಕುಳಿತಿಹನು ಶ್ರೀನಿವಾಸ
ಸಾಕು ಸಾಕಪ್ಪ ಇವನ
ಸಹವಾಸ!
ಸಿಗಬೇಡ ನೀನು ಇವನ
ಬಾಯಲ್ಲಿ
ಗ್ರಹಚಾರ ಬಿಡಿಸುವನು ಒಂದು
ಕ್ಷಣದಲ್ಲಿ!
ಇವನೊಬ್ಬ ಜೋಕರ್ ಸಂದೇಹವಿಲ್ಲ
ಹಾಕಬೇಕು ಇವನ ಬಾಯಲ್ಲಿ
ಬೆಲ್ಲ!
ಇವನ ಮುಂದೆ ಗಂಗಾವತಿ
ಪ್ರಾಣೇಶ
ಮಾಡಬೇಕಾಗುವುದು ಪ್ರಾಯೋಪವೇಶ!
No comments:
Post a Comment